
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂ. 16 ರಂದು ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವತಿಯಿಂದ ಒಂದು ದಿನದ ಉಚಿತ ಯೋಗ ತರಗತಿ ಶಿಬಿರ ವನ್ನು ಸುಳ್ಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ಕಾರ್ಯದರ್ಶಿ ತೇಜಸ್ವಿ ಕಡಪಳ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಶಿಬಿರವನ್ನು ಉದ್ಘಾಟಿಸಿದರು. ಆಯುಷ್ ಪ್ರೋಟೋಕಾಲ್ ನಿರ್ದೇಶನದಂತೆ ಯೋಗ ಶಿಬಿರವು ನಡೆಯಿತು.















.

30 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು
ಯೋಗ ತರಬೇತಿಯ ಸದುಪಯೋಗವನ್ನು ಪಡೆದುಕೊಂಡರು. ಶ್ರೀಮತಿ ಪ್ರಶ್ವಿಜ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಸ್ವಾಗತಿಸಿ, ವಂದಿಸಿದರು.









