ಬೆಳ್ಳಾರೆಯ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ವಿಜಯ ಹೋಮಿಯೋ ಕ್ಲಿನಿಕ್ ನ ಶಾಖೆ ಶುಭಾರಂಭ

0

ಬೆಳ್ಳಾರೆಯ ಮೇಲಿನ ಪೇಟೆಯ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ಪುತ್ತೂರಿನಲ್ಲಿರುವ ವಿಜಯ ಹೋಮಿಯೋ ಕ್ಲಿನಿಕ್ ನ ಶಾಖೆ ಜೂ. 20ರಂದು ಶುಭಾರಂಭಗೊಂಡಿತು. ಉದ್ಯಮಿ‌ ದೇವದಾಸ್ ಶೆಣೈ (ಶಾರದಾ ಸ್ಟೋರ್, ಪುತ್ತೂರು), ಶ್ರೀಮತಿ ದಿವ್ಯಾ ಶೆಣೈ, ಶ್ರೀಮತಿ ನಿರ್ಮಲಾ ಹರಿತಸ್ ಬೆಂಗಳೂರು, ಎಂ.ಎನ್. ಶೆಣೈ, ಸುಬ್ರಾಯ ಶೆಣೈ, ಹರೀಶ್ ಶೆಣೈರವರ ಕುಟುಂಬಸ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಮೊಕ್ತೇಸರರುಗಳಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಮತ್ತು ಸುರೇಶ್ ಪೈ, ಬೆಳ್ಳಾರೆಯ ವರ್ತಕರ ಸಂಘದ ಅಧ್ಯಕ್ಷ ಮಣಿಕ್ಕಾರ ರಾಜೇಶ್ ಶ್ಯಾನುಭಾಗ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಡಾ. ದೀಕ್ಷಿತ್ ಶೆಣೈ ಸ್ವಾಗತಿಸಿ, ಕ್ಲಿನಿಕ್ ನಡೆಸಲಿರುವ ಡಾ. ವರ್ಷಿಣಿ ಶೆಣೈ ವಂದಿಸಿದರು.