ಪಂಜ ಪೇಟೆಯ ಬಳಿ ಸ್ಕೂಟರ್- ಕಾರು ಡಿಕ್ಕಿ

0

ಪಂಜ ಪೇಟೆಯ ಕಡಬ ರಸ್ತೆಗೆ ತಿರುಗವ ಜಂಕ್ಷನ್ ಬಳಿ ಸ್ಕೂಟರ್ ಮತ್ತು ಕಾರು ಡಿಕ್ಕಿ ಹೊಡೆದ ಘಟನೆ ಜೂ.22ರಂದು ಮುಂಜಾನೆ ಸಂಭವಿಸಿದೆ.

ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಪಂಜ ಕಡೆಗೆ ಬರುತ್ತಿದ್ದ ಕಾರು ಮತ್ತು ಸ್ಕೂಟರ್ ಕಡಬ ರಸ್ತೆಗೆ ಹೋಗುತ್ತಿದ್ದಾಗ ಡಿಕ್ಕಿಯಾಗಿದೆ . ಕಾರಿನ ಮುಂಭಾಗ ಮತ್ತು ಸ್ಕೂಟರ್ ಕೂಡ ಜಖಂ ಗೊಂಡಿದೆ. ಸ್ಕೂಟರ್ ಸವಾರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.