ಕಸದ ಗೂಡಾಗಿರುವ ಕಳಂಜದ ಕೊಲ್ಲರ್ನೂಜು ಬಸ್ ತಂಗುದಾಣ

0

ಕಳಂಜ ಗ್ರಾಮದ ಕೊಲ್ಲರ್ನೂಜು ಬಸ್ ತಂಗುದಾಣ ಕಸದ ಗೂಡಾಗಿ ಪರಿವರ್ತನೆಗೊಂಡಿದೆ.
ರಾತ್ರಿಯ ಹೊತ್ತಲ್ಲಿ ಕೆಲವು ಕುಡುಕರು ಇಲ್ಲಿ ಬಂದು ಪಾರ್ಟಿ ಮಾಡುವುದು, ಕುಡಿದ ಮದ್ಯದ ಬಾಟಲ್, ನೀರಿನ ಬಾಲಟನ್ನು ಒಳಗಡೆಯೇ ಬಿಸಾಡಿ ಹೋಗುವುದು ನಡೆಯುತ್ತಿದೆ. ಇದರೊಂದಿಗೆ ತಿಂಡಿ ತಿಂದ ಬಳಿಕ ಪೊಟ್ಟಣಗಳನ್ನು ಬಸ್ ನಿಲ್ದಾಣದ ಒಳಗಡೆಯೇ ಬಿಸಾಡುತ್ತಿದ್ದಾರೆ. ಬೆಳಿಗ್ಗೆ ಪ್ರತಿನಿತ್ಯ ಶಾಲಾ ಕಾಲೇಜಿಗೆ ಹೋಗುವ ಹತ್ತಾರು ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ಮಳೆ ಬರುವಾಗ ಬಸ್ ನಿಲ್ದಾಣವನ್ನೇ ಅವಲಂಬಿಸುತ್ತಾರೆ. ಆದರೆ ಕಸಕಡ್ಡಿ ತುಂಬಿ ಗಬ್ಬು ನಾರುತ್ತಿರುವ ಬಸ್ ನಿಲ್ದಾಣದ ಒಳಗಡೆ ಮೂಗು ಮುಚ್ವಿಯೇ ನಿಲ್ಲಬೇಕಾದ ಅನಿವಾರ್ಯತೆ ಇದೆ. ಕೂಡಲೇ ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ಗಮನ ಹರಿಸಿ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸುವಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.