ಸೀನಿಯರ್ ಚೇಂಬರ್ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ್ ನಂಜೆ, ಕಾರ್ಯದರ್ಶಿಯಾಗಿ ಎ.ಕೆ ಮೋಹನ್, ಖಜಾಂಜಿಯಾಗಿ ಅಶೋಕ್ ಚೂಂತಾರು ಆಯ್ಕೆ

0
                          
ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಸುಳ್ಯ ಪಯಸ್ವಿನಿ ಘಟಕದ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಡಿಜಿ ಪ್ಲಸ್‌ನ ಮಾಲಕರಾದ ಚಂದ್ರಶೇಖರ್ ನಂಜೆ, ಕಾರ್ಯದರ್ಶಿಯಾಗಿ ಎ.ಕೆ ಮೋಹನ್, ಖಜಾಂಜಿಯಾಗಿ ಅಶೋಕ್ ಚೂಂತಾರು ಅವಿರೋದವಾಗಿ ಆಯ್ಕೆಯಾಗಿದಾರೆ. ನಿಕಟಪೂರ್ವಧ್ಯಕ್ಷರಾಗಿ ಪಿ.ಎಸ್ ಗಂಗಾಧರ್,  ಉಪಾಧ್ಯಕ್ಷರಾಗಿ ಚಂದ್ರಶೇಖರ್ ಪೇರಾಲು, ನಿರ್ದೇಶಕರಾಗಿ ದಿನೇಶ್ ಮಡಪ್ಪಾಡಿ, ಜಯಪ್ರಕಾಶ್ ಕೆ., ಎಸ್.ಆರ್ ಸೂರಯ್ಯ, ದಿನೇಶ್ ಅಂಬೆಕಲ್ಲು, ಕ.ಟಿ. ವಿಶ್ವನಾಥ್, ದೊಡ್ಡಣ್ಣ ಬರಮೇಲು, ದೇವಿಪ್ರಸಾದ್ ಕುದ್ಪಾಜೆ, ಗೋಕುಲ್ ದಾಸ್, ಮತ್ತು ಮಹಿಳಾ ಪ್ರತಿನಿದಿಯಾಗಿ ದಿವ್ಯ ನಂಜೆ ಮತ್ತು ಲತಾ ಕುದ್ಪಾಜೆ ಆಯ್ಕೆಯಾಗಿರುತ್ತಾರೆ. ಇದರ ಪದಗ್ರಹಣ ಸಮಾರಂಭವು ಜೂನ್ ೨೫ ರಂದು ನಡೆಯಲಿದ್ದು ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಪಿ.ಪಿ.ಎಫ್. ಚಿತ್ರಕುಮಾರ್ ಭಾಗವಹಿಸಲಿದ್ದಾರೆ.