ಗುತ್ತಿಗಾರು ಜೂನಿಯರ್ ಕಾಲೇಜಿನ ಕ್ಲಾಸ್ ರೂಂ ಮರು ನವೀಕರಣ

0

ಕೈ ಜೋಡಿಸಿದ ದಾನಿಗಳು, ಹಳೆ ವಿದ್ಯಾರ್ಥಿ ಬ್ಯಾಚ್

ಗುತ್ತಿಗಾರು ಜೂನಿಯರ್ ಕಾಲೇಜಿನ ಕ್ಲಾಸ್ ರೂಂ ಒಂದನ್ನು ನವೀಕರಣ ಮಾಡಲು ಹಳೆ ವಿದ್ಯಾರ್ಥಿ ಸಂಘದ ಒಂದು ಬ್ಯಾಚ್ ಹಾಗೂ ದಾನಿಗಳು ಸಹಕರಿಸಿರುವುದಾಗಿ ವರದಿಯಾಗಿದೆ.

ಕಾಲೇಜಿನ 2005-06 ರಲ್ಲಿ ದ್ವಿತೀಯ ಪಿ.ಯು ಪೂರೈಸಿದ ಬ್ಯಾಚ್ ಹಾಗೂ ಕೆಲ ವಿದ್ಯಾಭಿಮಾನಿಗಳ ಸಹಾಯ ಪಡೆದು ಕಾಲೇಜಿನ ಪರೀಕ್ಷೆ ಹಾಲ್ ನಷ್ಟು ದೊಡ್ಡದರಿರುವ ಕೊಠಡಿ ಒಂದಕ್ಕೆ ಟೈಲ್ಸ್ ಹಾಕಿ ಬಣ್ಣ ಬಳಿದು, ಪ್ಯಾನ್ ಅಳವಡಿಸಿ ನವೀಕರಣ ಮಾಡಲಾಗಿದೆ. ಸುಮಾರು 1.40 ಲಕ್ಷ ವೆಚ್ಚ ಮಾಡಿ ರೂಂ ನ್ನು ವ್ಯವಸ್ಥೆ ಗೊಳಿಸಲಾಯಿತು.