ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

0

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಕ್ಷಕ ಪೋಷಕರ ಸಭೆಯು ಜೂ. 21 ರಂದು ಜರುಗಿತು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರೆ. ಫಾ.ವಿಕ್ಟರ್ ಡಿ’ಸೋಜಾರವರು ವಹಿಸಿದ್ದರು. ಪ್ರೌಢಶಾಲಾ ಪೋಷಕರ ಸಮಿತಿಯ ಅಧ್ಯಕ್ಷ ಗುರು ಬಿ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ರೀಟಲತಾ ಡಿ ಸಿಲ್ವ ರವರು ಸ್ವಾಗತಿಸಿ, ಪೋಷಕರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಪ್ರೌಢಶಾಲಾ ಶಿಕ್ಷಕರ ಕಾರ್ಯದರ್ಶಿ ಶ್ರೀಮತಿ ದೇವಿಲತಾ ಪ್ರಸ್ತುತ ವರ್ಷದ ವರದಿ ಸಲ್ಲಿಸಿದರು.

ನೂತನ ಶಿಕ್ಷಕ -ರಕ್ಷಕ ಸಮಿತಿ ರಚನೆ

ಈ ಸಂದರ್ಭ ನೂತನ ಶಿಕ್ಷಕ ರಕ್ಷಕ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಹೇಮನಾಥ್ ಕೊಡಿಯಾಲಬೈಲು , ಪ್ರತಿನಿಧಿಗಳಾಗಿ ಶ್ರೀಮತಿ ಮಂಜುಳಾ ಕಾಯರ್ತ್ತೋಡಿ, ಕುಸುಮಾಧರ ಕುತ್ತಿಮುಂಡ, ಶ್ರೀಮತಿ ಸರಸ್ವತಿ ದಕ್ಷಿಣ ಬೀರಮಂಗಲ, ವಿಜಯಕುಮಾರ್ ಕಾಯರ್ ರ್ತೋಡಿ , ಶ್ರೀಮತಿ ದಿನೇಶ್ವರಿ ಕುಂಟುಕಾಡು ಇವರುಗಳನ್ನು ಆಯ್ಕೆ ಮಾಡಲಾಯಿತು. ಹಿಂದಿನ ಪೋಷಕ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಂಪ್ಯೂಟರ್ ಶಿಕ್ಷಕಿ ಶ್ರೀಮತಿ ಅನಿತಾ ಮಸ್ಕರೇನಸ್ ವಂದಿಸಿ, ಶಿಕ್ಷಕಿಯರಾದ ಶ್ರೀಮತಿ ಚೇತನ ಮತ್ತು ಶ್ರೀಮತಿ ಜ್ಯೋತಿ.ಜೆ.ರೈ ಕಾರ್ಯಕ್ರಮ ನಿರೂಪಿಸಿದರು . ಶಿಕ್ಷಕ ಶಿಕ್ಷಕೇತರ ವೃಂದ ಸಹಕರಿಸಿದರು.

ಸಾನ್ವಿಗೆ ಅಭಿನಂದನೆ

ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಆರು ಅಂಕ ಅಧಿಕಗಳಿಸಿ ಶಾಲೆಗೆ ದ್ವಿತೀಯ ಸ್ಥಾನಿಯಾದ ಸಾನ್ವಿ ಪಿ. ಎನ್.ನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.