ಮರ್ಕಂಜ ಪ್ರೌಢ ಶಾಲಾ ನೂತನ ಮಂತ್ರಿ ಮಂಡಲ ರಚನೆ

0

ಸರಕಾರಿ ಪ್ರೌಢ ಶಾಲೆ ಮರ್ಕಂಜ ಇಲ್ಲಿ 2024-25ನೇ ಸಾಲಿನ ನೂತನ ಮಂತ್ರಿ ಮಂಡಲ ರಚನೆ ನಡೆಯಿತು.

ಮುಖ್ಯಮಂತ್ರಿಯಾಗಿ ೧೦ನೇ ತರಗತಿಯ ಮೋಕ್ಷಿತ್ ಪಿ.ವಿ, ಉಪಮುಖ್ಯಮಂತ್ರಿಯಾಗಿ ೯ನೇ ತರಗತಿಯ ಧನ್ಯಶ್ರೀ ಆಯ್ಕೆಯಾದರು.

ಶಿಸ್ತು ಮಂತ್ರಿಯಾಗಿ ೧೦ನೇ ತರಗತಿಯ ಚಿತ್ರಾಶ್ವ ಬಿ.ಎಸ್, ಉಪಶಿಸ್ತುಮಂತ್ರಿಯಾಗಿ ಪೂಜಾ ಬಿ.ಎನ್ (೯ನೇ), ವಾರ್ತಾ ಮಂತ್ರಿಯಾಗಿ ಯಜ್ಞಾಶ್ರೀ ಕೆ.ಡಿ (೧೦ನೇ), ಉಪವಾರ್ತಾ ಮಂತ್ರಿಯಾಗಿ ಸುಭಿಕ್ಷಾ ಎಸ್ (೯ನೇ), ಸ್ವಚ್ಛತಾ ಮಂತ್ರಿಯಾಗಿ ಜಶ್ಮಿತಾ (೯ನೇ), ಭವಿತ್ (೮ನೇ), ಉಪಸ್ವಚ್ಛತಾ ಮಂತ್ರಿಯಾಗಿ ಡೀಕ್ಷಾ ಎಂ.ಡಿ (೮ನೇ), ಭೌಶಿತ್ (೮ನೇ), ಕೃಷಿ, ಆರೋಗ್ಯ, ನೀರಾವರಿ ಮಂತ್ರಿಯಾಗಿ ಶಿಷ್ಮ ಡಿ.ಎಲ್ (೧೦ನೇ), ಉಪ ಕೃಷಿ, ಆರೋಗ್ಯ, ನೀರಾವರಿ ಮಂತ್ರಿಯಾಗಿ ರಕ್ಷಾ ಕೆ. (೮ನೇ), ಸಾಂಸ್ಕೃತಿಕ ಮಂತ್ರಿಯಾಗಿ ದುಷ್ಯಂತ್ ಕೆ. (೧೦ನೇ), ಉಪಸಾಂಸ್ಕೃತಿಕ ಮಂತ್ರಿಯಾಗಿ ಶ್ರುತಿ (೯ನೇ), ಕ್ರೀಡಾ ಮಂತ್ರಿಯಾಗಿ ಯುಕ್ತೇಶ್ ಕೆ. (೧೦ನೇ), ಉಪಕ್ರೀಡಾ ಮಂತ್ರಿಯಾಗಿ ಧನ್ಯಶ್ರೀ ಜಿ. (೯ನೇ), ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.