ಜೂ.30: ಸುಳ್ಯದಲ್ಲಿ ಅಮರ ಸಂಘಟನಾ ಸಮಿತಿ ವತಿಯಿಂದ ಉಚಿತ 1000 ಸಸಿ ವಿತರಣಾ ಕಾರ್ಯಕ್ರಮ

0

ಸುಳ್ಯ ಅಮರ ಸಂಘಟನಾ ಸಮಿತಿ ವತಿಯಿಂದ ವನ ಮಹೋತ್ಸವ ಪ್ರಯುಕ್ತ ಜೂ.30 ರಂದು ಉಚಿತವಾಗಿ 1000 ಸಸಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮವು ಸುಳ್ಯದ ಪ್ರಭು ಬುಕ್ ಸ್ಟಾಲಿನ ಎದುರುಗಡೆ ನಡೆಯಲಿರುವುದು.

ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರ ವರೆಗೆವಿತರಿಸಲಾಗುವುದು.ಒಬ್ಬರಿಗೆ ತಲಾ ಎರಡು ಗಿಡಗಳನ್ನು ಮಾತ್ರ ವಿತರಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.