ರೋಟರಿ ನಿರ್ಗಮಿತ ಪದಾಧಿಕಾರಿಗಳಿಂದ ಕೃತಜ್ಞತೆ ಸಮರ್ಪಣಾ ಸಭೆ

0

ಸುಳ್ಯ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 3 ರಂದು ನಡೆಯಲಿದ್ದು, ಅವಧಿ ಮುಗಿಯುತ್ತಿರುವ ಅಧ್ಯಕ್ಷ ಆನಂದ ಗೌಡ ಖಂಡಿಗ, ಕಾರ್ಯದರ್ಶಿ ಕಸ್ತೂರಿ ಶಂಕರ್, ಖಜಾಂಚಿ ಶ್ರೀಮತಿ ಆಶಿತಾ ಕೇಶವ್ ರವರ ವತಿಯಿಂದ ಕೃತಜ್ಞತೆ ಸಮರ್ಪಿಸುವ ಕೊನೆಯ ಮಾಸಿಕ ಸಭೆ ಜೂ.26 ರಂದು ರೋಟರಿ ಶಾಲಾ ಸಭಾಂಗಣದಲ್ಲಿ ನಡೆಯಿತು.
ರೋಟರಿ ಅಧ್ಯಕ್ಷ ರೊ.ಆನಂದ ಗೌಡರು ಸಭಾಧ್ಯಕ್ಷತೆ ವಹಿಸಿದ್ದರು. ರೋಟರಿಯ ವಿವಿಧ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ದಾನಿಗಳನ್ನು ಸತ್ಕರಿಸಲಾಯಿತು. ಕಳೆದ 15 ವರ್ಷಗಳಿಂದ ಸವಣೂರಿನಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸಂಘಟಿಸುತ್ತಿರುವ ರೊ.ಕೆ.ಸೀತಾರಾಮ ರೈಯವರನ್ನು ಸನ್ಮಾನಿಸಲಾಯಿತು.

ರೋಟರಿ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ರೊ.ಆನಂದ ಗೌಡರ ಸೇವೆಯನ್ನು ಶ್ಲಾಘಿಸಲಾಯಿತು. ಖಜಾಂಚಿ ಶ್ರೀಮತಿ ಆಶಿತಾ ಕೇಶವ್ ವಂದಿಸಿದರು. ಐ.ಪಿ.ಪಿ. ರೊ.ಚಂದ್ರಶೇಖರ ಪೇರಾಲು, ಮುಂದಿನ ರೊ.ಯೋಗಿತಾ ಗೋಪಿನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.