ಪಂಜ- ಗುತ್ತಿಗಾರು ರಸ್ತೆ:ದೇವಳದ ಸಮೀಪದ ಅಪಾಯದ ತಿರುವು ತೆರವು ಗೊಳಿಸಿ

0

ಪಂಜದಿಂದ ಬಳ್ಳಕ ಮಾರ್ಗವಾಗಿ ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ ಪಂಜ ದೇವಳದ ಮೈದಾನಕ್ಕೆ ಸಂಪರ್ಕಿಸುವ ಮೆಟ್ಟಿಲ
ಬಳಿ ರಸ್ತೆಯ ದೊಡ್ಡ ತಿರುವೊಂದು ಸಂಪೂರ್ಣ ಹದಗೆಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಈ ರಸ್ತೆ ಬದಿಯಲ್ಲಿ ಹೋಗುವ ಪಾದಚಾರಿಗಳ ಗೋಳು ಹೇಳತೀರದು.

ಅತ್ಯಂತ ದೊಡ್ಡ ತಿರುವು ಕಿರಿದಾದ ರಸ್ತೆ ಇದಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಡಾಮರು ರಸ್ತೆಗೆ ತಾಗಿದ್ದ ಮಣ್ಣು ಕೂಡ ಕೊಚ್ಚಿ ಹೋಗಿ ಹೊಂಡ ನಿರ್ಮಾಣವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಈ ಹಿಂದೆ ಇದೇ ತಿರುವಿನಲ್ಲಿ ಅಪಘಾತಗಳು ಸಂಭವಿಸಿವೆ. ಸಂಬಂಧ ಪಟ್ಟವರು ಗಮನ ಹರಿಸಿ ಸಮರ್ಪಕ ಚರಂಡಿ,ವೈಜ್ಞಾನಿಕ ರೀತಿಯಲ್ಲಿ ತಿರುವು ತೆರವು ಗೊಳಿಸಿ ಮುಂದೆ ಸಂಭವಿಸ ಬಹುದಾದ ಅನಾಹುತಗಳನ್ನು ತಪ್ಪಿಸ ಬೇಕಾಗಿದೆ.