ಉಬರಡ್ಕ :ಅಪಾಯದಲ್ಲಿದೆ ದಲಿತ ಕಾಲೊನಿ

0


ಉಬರಡ್ಕ ಗ್ರಾಮದ ಕೋಡಿಯಡ್ಕ ದಲಿತ ಕಾಲೊನಿಯಲ್ಲಿ ಬರೆ ಜರಿಯಲು ಸಿದ್ಧವಾಗಿ ನಿಂತಿದ್ದು, ಕೆಲವು ಮನೆಗಳು ಅಪಾಯದಲ್ಲಿವೆ.
೫ ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಇಲ್ಲಿ ಪ್ರತಿ ಮನೆಯ ಸಾಲಿನಲ್ಲೂ ಬರೆಗಳಿವೆ. ಒಂದು ಕಡೆ ಬರೆ ನೀರು ತುಂಬಿ ಕುಸಿಯಲು ಸಿದ್ಧಗೊಂಡಂತೆ ಊದಿಕೊಂಡಿದೆ. ಬರೆ ಕುಸಿದರೆ ಕೆಳಗಡೆಯ ಮನೆಗಳು ಮತ್ತು ಮೇಲ್ಗಡೆಯ ಮನೆಗಳು ಅಪಾಯಕ್ಕೆ ಒಳಗಾಗಲಿವೆ. ಆದ್ದರಿಂದ ತಾಲೂಕು ಆಡಳಿತ ಮತ್ತು ಗ್ರಾ.ಪಂ. ಕೂಡಲೇ ಕ್ರಮ ಕೈಗೊಂಡು ಸಂಭವನೀಯ ಅಪಾಯವನ್ನು ನಿವಾರಿಸಬೇಕಾಗಿದೆ. ಹಾಗೂ ಬರೆ ಕುಸಿಯದಂತೆ ತಡೆಗೋಡೆ ರಚಿಸಬೇಕಾಗಿದೆ.