








ಎಡಮಂಗಲ ಗ್ರಾಮದ ದೇವರ ಮಜಲಿನಲ್ಲಿ ಕೇರ್ಪಡ ಕೂಡುಕಟ್ಟಿನ ಶಿರಾಡಿ ರಾಜನ್ ಸಾನಿಧ್ಯದ ಬಳಿ ಎಡಮಂಗಲ ಸೊಸೈಟಿ ನಿರ್ದೇಶಕ ಅವಿನಾಶ್ ದೇವರ ಮಜಲುರವರ ಮಾಲಕತ್ವದ ತೋಟದಲ್ಲಿ ಸಹಸ್ರರಾರು ವರ್ಷದ ದೇವರ ಮರ (ಅಶ್ವತ್ಥ ಮರ) ಧರಾಶಾಯಿಯಾಗಿ ಅಪಾರ ನಷ್ಟ ಸಂಭವಿಸಿದೆ. ೪೦ ಸೆಂಟ್ಸ್ ತೋಟದಲ್ಲಿ ವಿಶಾಲವಾಗಿ ಬೆಳೆದಿದ್ದ ಈ ಮರ ಫಸಲು ಬರುವ ನೂರಾರು ಅಡಿಕೆ ಮರ, ತೆಂಗಿನ ಮರಗಳು, ಕೊಕ್ಕೊ ಗಿಡಗಳು, ಅಲ್ಲದೆ ನೀರಾವರಿ ಲೈನಿನ ಪೈಪುಗಳು ತೋಟ ಒಳಗಿದ್ದ ರಸ್ತೆಯ ಮೋರಿಗಳು ಹುಡಿಯಾಗಿವೆ.
ಮರು ನಿರ್ಮಾಣ, ಕೃಷಿ ಮಾಡುವುದು, ಮರ ತೆರವುಗೊಳಿಸುವುದು, ಸುಮಾರು ನಾಲ್ಕು ಲಕ್ಷ ನಷ್ಟ ಆಗಿರಬಹುದೆಂದು ಅಂದಾಜಿಸಲಾಗಿದೆ. ಪಂಚಾಯತ್‌ಗೆ ವಿಷಯ ತಿಳಿಸಲಾಗಿದ್ದು, ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಪಿಡಿಒ ಶ್ರೀಮತಿ ಭವ್ಯ, ಕಂದಾಯ ಇಲಾಖಾಧಿಕಾರಿಗಳು, ನಾರಾಯಣ ಇಂಜಿನಿಯರ್, ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದರು.









