ಜಾಲ್ಸೂರು- ಸುಬ್ರಹ್ಮಣ್ಯ ರಸ್ತೆ ನಿರ್ವಹಣೆ ಮರೆತ ಲೋಕೋಪಯೋಗಿ ಇಲಾಖೆ

0


ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಜಾಲಸೂರು ಸುಬ್ರಹ್ಮಣ್ಯ ರಸ್ತೆಯ ಸೋಣಂಗೇರಿಯಿಂದ ಹಿಡಿದು ದೊಡ್ಡತೋಟ- ಎಲಿಮಲೆ- ಮಾವಿನಕಟ್ಟೆ -ಗುತ್ತಿಗಾರು- ಹಾಲೆಮಜಲು-ಮರಕತ ಸೇರಿದಂತೆ ಸುಬ್ರಮಣ್ಯದವರೆಗೆ ರಸ್ತೆಯ ಇಕ್ಕೆಲೆಗಳಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಗೆ ಚಾಚಿಕೊಂಡಿವೆ. ಅಲ್ಲದೆ ಅಲ್ಲಲ್ಲಿ ಬರೆ ಜರಿದು, ಚರಂಡಿಯ ಎಲ್ಲ ಮುಚ್ಚಿ ಹೋಗಿದ್ದು ಮಳೆಯ ನೀರು ಎಲ್ಲಾ ರಸ್ತೆಯಲ್ಲಿ ಹರಿಯುತ್ತಿದೆ. ಜರಿದ ಮಣ್ಣು ರಸ್ತೆಗೆ ಬಿದ್ದು ರಸ್ತೆ ತುಂಬೆಲ್ಲ ಕೆಸರಾಗಿದ್ದು ದ್ವಿಚಕ್ರ ವಾಹನದ ಸವಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ.

ಹಾಗೂ ರಸ್ತೆಗೆ ಚಾಚಿದ ಗಿಡಗಂಟಿಗಳಿಂದಾಗಿ ಎದುರು ಬದರು ಬರುವ ವಾಹನಗಳು ಪರಸ್ಪರ ಚಾಲಕರಿಗೆ ಕಾಣದೆ ವಾಹನ ಅಪಘಾತವಾಗುವ ಸಂಭವ ಹೆಚ್ಚು ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ತುರ್ತಾಗಿ ಗಮನ ಹರಿಸಿ ರಸ್ತೆ ದುರಸ್ತಿ ಪಡಿಸಿ ಮುಂದೆ ನಡೆಯುವ ರಸ್ತೆ ಅಪಘಾತವನ್ನು ತಪ್ಪಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸುತ್ತಿದ್ದಾರೆ. (ವರದಿ :ಡಿ.ಹೆಚ್.)