ಜು.3ರಂದು ಸುಳ್ಯ ಇನ್ನರ್ ವೀಲ್ ಕ್ಲಬ್ ಪದಗ್ರಹಣ ಸಮಾರಂಭ

0

ಸುಳ್ಯ ಇನ್ನರ್ ವೀಲ್ ಕ್ಲಬ್ ನ 2024-25 ನೇ ಸಾಲಿನ ಅಧ್ಯಕ್ಷೆ ಚಿಂತನ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಡಾ.ಸವಿತಾ ಹೊದ್ದೆಟ್ಟಿ, ಕೋಶಾಧಿಕಾರಿ ಡಾ. ಸ್ಮಿತಾ ಹರ್ಷವರ್ಧನ್ ಆಯ್ಕೆಯಾಗಿದ್ದು ನೂತನ ತಂಡದ ಪದಗ್ರಹಣ ಸಮಾರಂಭವು ಜು.3ರಂದು ಸುಳ್ಯದ ರಥಬೀದಿಯಲ್ಲಿರುವ ರೋಟರಿ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಲಿದೆ.

ಸುಳ್ಯ ಇನ್ನರ್ ವೀಲ್ ಕ್ಲಬ್ ನ ಮಾಜಿ ಅಧ್ಯಕ್ಷೆ ಶೈಮಾ ಜಿತೇಂದ್ರ ಪದಗ್ರಹಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯ ಆಯುರ್ವೇದ ತಜ್ಞರಾದ ಡಾ.ಸುಧಾ ಶ್ರೀಪತಿ ರಾವ್ ಭಾಗವಹಿಸಲಿದ್ದಾರೆ.