ಪೆರಾಜೆ :ಆಟೋ ನಿಲ್ದಾಣದ ಬಳಿ ಅಪಾಯಕಾರಿ ಸ್ಥಿತಿಯಲ್ಲಿರುವ ಹಲಸಿನ ಮರ

0

ನಿಲ್ದಾಣದ ಮೇಲ್ಭಾಗದಲ್ಲಿ ಹಾದು ಹೋಗಿರುವ ಎಚ್ ಟಿ ಲೈನ್ ನಿಂದ ಸ್ಥಳೀಯರಲ್ಲಿ ಮೂಡಿದ ಆತಂಕ

ಪೆರಾಜೆ ಸರ್ಕಲ್ ಬಳಿ ಇರುವ ಆಟೋ ನಿಲ್ದಾಣದ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಸಂಪರ್ಕದ ಎಚ್ ಟಿ ಲೈನ್ ಸ್ಥಳೀಯರಲ್ಲಿ ಮತ್ತು ಆಟೋ ಚಾಲಕರಲ್ಲಿ ಆತಂಕವನ್ನು ಮೂಡಿಸಿದೆ.ಕಾರಣ ಇಲೇ ಪಕ್ಕದಲ್ಲಿರುವ ಬೃಹತಾಕಾರದ ಹಲಸಿನ ಮರ. ಇದರ ರಂಬೆ ಕೊಂಬೆಗಳು ಬೃಹತಾಾಕಾರದಲ್ಲಿ ಬೆಳೆದು ನಿಂತಿದ್ದು ಗಾಳಿ ಬರುವ ಸಂದರ್ಭ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.


ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ವಿದ್ಯುತ್ ಕಂಬ ಮತ್ತು ತಂತಿಗಳಿಂದ ಉಂಟಾದ ಅನಾಹುತಗಳು ಸ್ಥಳೀಯರಲ್ಲಿ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.


ಇದು ಚೆಸ್ಕಾಂ ವ್ಯಾಪ್ತಿಯಲ್ಲಿ ಬರುತ್ತಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು,ಸ್ಥಳೀಯ ಗ್ರಾಮ ಪಂಚಾಯತಿ ನವರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಈ ಭಾಗದ ಆಟೋ ಚಾಲಕರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.