ಮರ್ಕಂಜ ಮಿತ್ತಡ್ಕ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಮರ್ಕಂಜದಲ್ಲಿ 2024-25 ನೇ ಸಾಲಿನ ಶಾಲಾ ಮಂತ್ರಿ ಮಂಡಲ ಜೂ.8 ರಂದು ಚುನಾವಣೆ ಮಾಡುವ ಮೂಲಕ ನಡೆಯಿತು.

ಶಾಲಾ ನಾಯಕನಾಗಿ ತನುಶ್ ಹೆಚ್., ಉಪನಾಯಕಿಯಾಗಿ ಪ್ರತೀಕಾ ಕೆ.ಯು., ಗೃಹ ಮಂತ್ರಿಯಾಗಿ ಗೌತಮ್ ಕೆ., ಉಪಗೃಹಮಂತ್ರಿಯಾಗಿ ಧನ್ವಿತ್ ಸಿ.ಹೆಚ್., ಸ್ವಚ್ಛತಾ ಮಂತ್ರಿಯಾಗಿ ನಿರೀಕ್ಷಾ, ಉಪ ಸ್ವಚ್ಛತಾ ಮಂತ್ರಿಯಾಗಿ ರಕಿತಾ, ಆರೋಗ್ಯ ಮಂತ್ರಿಯಾಗಿ ಮೋಶಿಕ್, ಉಪ ಆರೋಗ್ಯ ಮಂತ್ರಿಯಾಗಿ ರಿತಿಕ, ಸಾಂಸ್ಕೃತಿಕ ಮಂತ್ರಿಯಾಗಿ ವಂಶಿಕಾ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಪೃಥ್ವಿ, ವಿದ್ಯಾ ಮಂತ್ರಿಯಾಗಿ ಯಶ್ವಿತ್, ಉಪ ವಿದ್ಯಾ ಮಂತ್ರಿಯಾಗಿ ಕಾರ್ತಿಕ್, ವಾರ್ತಾ ಮಂತ್ರಿಯಾಗಿ ಕುಶ್ವಂತ್, ಉಪ ವಾರ್ತಾ ಮಂತ್ರಿಯಾಗಿ ಹರ್ಷಿತಾ, ಕ್ರೀಡಾ ಮಂತ್ರಿಯಾಗಿ ಭವಿತ್, ಉಪ ಕ್ರೀಡಾ ಮಂತ್ರಿಯಾಗಿ ಯನ್ವಿತ್, ಶಿಸ್ತು ಮಂತ್ರಿಯಾಗಿ ಛಾಯಾ ಸಾಗರ್, ಉಪ ಶಿಸ್ತು ಮಂತ್ರಿಯಾಗಿ ಪಿ.ಎನ್.ಗೌತಮ್, ನೀರಾವರಿ ಮಂತ್ರಿಯಾಗಿ ಪ್ರಣಾಮ್, ಉಪ ನೀರಾವರಿ ಮಂತ್ರಿಯಾಗಿ ಆಕಾಶ್, ವಿರೋಧ ಪಕ್ಷದ ನಾಯಕಿಯಾಗಿ ಕುಷ್ಮಿತಾ ಪಿ.ಡಿ. ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಹ ಶಿಕ್ಷಕಿ ಶ್ರೀಮತಿ ರೋಹಿಣಿ.ಕೆ, ಅತಿಥಿ ಶಿಕ್ಷಕಿಯರಾದ ಶ್ರೀಮತಿ ವೀಣಾ ಹಾಗೂ ಶ್ರೀಮತಿ ಸವಿತಾ ಸಹಕರಿಸಿದರು.