ಗಾಂಧಿನಗರ : ಕೋಟೆ ಫೌಂಡೇಶನ್ ರೈಟ್ ಟು ಲಿವ್ ಮತ್ತು ಸಿಸ್ಕೋ ಕಂಪೆನಿ ಬೆಂಗಳೂರು ವತಿಯಿಂದ ಸುಳ್ಯದಲ್ಲಿ ವಿವಿಧ ಕಾರ್ಯಕ್ರಮ

0

ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಹಾಗೂ ಉಚಿತ ಕಣ್ಣಿನ ಪರೀಕ್ಷಾ ಶಿಬಿರ, ವಿದ್ಯಾರ್ಥಿ ವೇತನ ವಿತರಣೆ

ಈ ಸಂಸ್ಥೆಗಳು ಬಡ ವಿದ್ಯಾರ್ಥಿಗಳ ಬಗ್ಗೆ ತೋರುತ್ತಿರುವ ಕಾಳಜಿ ಪ್ರಶಂಸನೀಯ: ಭಾಗೀರಥಿ ಮುರುಳ್ಯ

ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ರಾಜ್ಯಾದ್ಯಂತ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ, ಸಮಾಜದ ಆಸ್ತಕರಿಗೆ ವಿವಿಧ ಕೊಡುಗೆಗಳನ್ನು ನೀಡಿ ಗುರುತಿಸಿಕೊಂಡಿರುವ ಕೋಟೆ ಫೌಂಡೇಶನ್ ರೈಟ್ ಟು ಲಿವ್ ಮತ್ತು ಸಿಸ್ಕೋ ಕಂಪೆನಿ ಬೆಂಗಳೂರು ವತಿಯಿಂದ ಸುಳ್ಯದ ಗಾಂಧಿನಗರ ಕೆಪಿಎಸ್‌ನಲ್ಲಿ ಜೂ ೨೯ ರಂದು ಕಾರ್ಯಗಾರ ಶಿಬಿರ, ವಿದ್ಯಾರ್ಥಿ ವೇತನ ವಿತರಣೆ, ಬ್ಯಾಗ್ ವಿತರಣೆ, ಉಚಿತ ನೇತ್ರಾ ತಪಾಸಣೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಗಮ ಕಾರ್ಯಕ್ರಮ ಕೆಪಿಎಸ್ ಶಾಲೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ನೆರವೇರಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸಂಸ್ಥೆಗೆ ಶಾಲಾ ಮಕ್ಕಳ, ಮತ್ತು ಸಮಾಜದಲ್ಲಿ ಇರುವ ಆಸಕ್ತರ ಮೇಲೆ ಇರುವ ಕಾಳಜಿಯ ಬಗ್ಗೆ ಮಾತನಾಡಿ ಶ್ಲಾಘನೆ ವ್ಯಕ್ತಪಡಿಸಿದರು.
ದೂರದ ಊರುಗಳಿಂದ ಸುಳ್ಯದಂತಹ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಪರಿಸರ ಮತ್ತು ಶಾಲೆಗಳ ಅಭಿವೃದ್ಧಿಯ ಬಗ್ಗೆ ಯೋಚಿಸಿ ಕುದ್ದು ನಿಂತು ಇಂತಹ ಸಮಾಜ ಮುಖಿ ಕಾರ್ಯ ಮಾಡುವಂತಹ ಸಂಸ್ಥೆಗಳಿಗೆ ನಾವು ಕೃತಜ್ಞರಾಗಬೇಕೆಂದು ಹೇಳಿದರು.


ಸಂಸ್ಥೆಗಳು ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಸ್ಥೆಗಳು ಕೆಪಿಎಸ್ ಶಾಲೆಯ ಕಳೆದ ಸಾಲಿನ ೧೦ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಿದ ಸ್ಕಾಲರ್ ಶಿಪ್ ವಿತರಣೆ ನಡೆಸಿದರು.
ಸುಮಾರು ೬೮೦ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮತ್ತು ೧೮ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಿದರು.


ಇದರೊಂದಿಗೆ ಆಯೋಜಕರ ವತಿಯಿಂದ ವಿದ್ಯಾರ್ಥಿಗಳಿಗೆ, ಮತ್ತು ಪೋಷಕರಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆದು ಸ್ಥಳದಲ್ಲಿಯೇ ಕನ್ನಡಕ ನೀಡುವ ಕಾರ್ಯಕ್ರಮ ನಡೆಯಿತು.

ಸಭಾ ವೇದಿಕೆಯಲ್ಲಿ ನ.ಪಂ ಸದಸ್ಯರುಗಳಾದ ಪ್ರವೀತಾ, ಶರೀಫ್ ಕಂಠಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಶಾಲಾ ಉಪ ಪ್ರಾಂಶುಪಾಲೆ ಜ್ಯೋತಿಲಕ್ಷ್ಮಿ, ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಪದ್ಮನಾಭ, ಕೋಟೆ ಪೌಡೇಶನ್ ಸಂಸ್ಥೆಯ ಸದಸ್ಯ ಪ್ರದೀಪ್, ಸಿಸ್ಕೊ ಕಂಪನಿಯ ಉದ್ಯೋಗಿ ವೀರೇಶ್ ಮೊದಲಾದವರು ಉಪಸ್ಥಿತರಿದ್ದರು.


ಪ್ರಾಂಶುಪಾಲ ಅಬ್ದುಲ್ ಸಮದ್ ಸ್ವಾಗತಿಸಿ, ಹಿರಿಯ ಶಿಕ್ಷಕ ಚಿನ್ನಪ್ಪ ಎಂ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕೋಟೆ ಪೌಂಡೇಶನ್ ಸಿಬ್ಬಂದಿಗಳಾದ ಶಂಕರ್, ಪ್ರದೀಪ್, ಸಿಸ್ಕೊ ಕಂಪನಿಯ ಸಿಬ್ಬಂದಿಗಳಾದ ಸಂಪತ್, ಪವನ್, ನಾಗೇಶ್, ಆರತಿ, ಅಣ್ಣಾ ರೈ ಮೊದಲಾದವರು ಸಹಕರಿಸಿದರು.
ಕಣ್ಣಿನ ತಪಾಷಣೆ ವಿಭಾಗದಲ್ಲಿ ಆಕ್ಟೊಮೆಟ್ರಿರ್ಸ್ಟ್ ಸಚಿನ್ ಉಡುಪಿ ನಿರ್ವಹಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಚಿತ್ರಕಲೆ,ವಿದ್ಯಾರ್ಥಿಗಳೊಂದಿಗೆ ಸಂವಾದ, ಇನ್ನಿತರ ಶೈಕ್ಷಣಿಕ ಚಟುವಟಿಕೆಗಳು ನಡೆಯಿತು.

ಸಂಸ್ಥೆಗಳ ವತಿಯಿಂದ ಜೂ. ೨೮ ರಿಂದ ೩೦ ರ ವೆರೆಗೆ ವಿವಿಧಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶಾಲಾ ಶಿಕ್ಷಕರು ಮತ್ತು ಶಾಲಾ ಸಮಿತಿಯ ಸದಸ್ಯರುಗಳೊಂದಿಗೆ ಜೊತೆ ಗೂಡಿ ಜೂ ೨೮ ರಂದು ಸುಳ್ಯದ ವಿವಿಧ ಗ್ರಾಮಗಳಿಗೆ ತೆರಳಿ ಗದ್ದೆಯಲ್ಲಿ ನೇಜಿ ನೆಟ್ಟು ಭತ್ತ ಬೆಳೆಯ ಬಗ್ಗೆ ಅರಿವು ಮೂಡಿಸಿದರು.
ಇದರ ಅಂಗವಾಗಿ ಜೂ ೩೦ ರಂದು ತೋಟಗಾರಿಕೆ ಸ್ಥಳದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಈ ವೇಳೆ ಸುದ್ದಿಗೆ ತಿಳಿಸಿದರು.