ಬೆಳ್ಳಾರೆಯ ನವಗ್ರಾಮದಲ್ಲಿ ಬರೆ ಕುಸಿತ – ಅಪಾಯದಲ್ಲಿ ಮನೆ

0

ಕುಸಿಯುತ್ತಿರುವ ಬರೆಗೆ ಟರ್ಪಾಲ್ ಹಾಕಿ ತಾತ್ಕಾಲಿಕ ದುರಸ್ಥಿ

ಬೆಳ್ಳಾರೆ ಗ್ರಾಮದ ನವಗ್ರಾಮದಲ್ಲಿ ಇಂದು ಸುರಿದ ಭಾರೀ ಮಳೆಗೆ ಬರೆ ಕುಸಿದು ಬಿದ್ದಿದ್ದು ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ.


ಜಯರಾಮ ಉಮಿಕ್ಕಳ ಎಂಬವರ ಮನೆಯ ಎದುರಿನ ಬರೆ ಕುಸಿದು ಬಿದ್ದ ಪರಿಣಾಮ ಮನೆ ಅಪಾಯದಲ್ಲಿದ್ದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮ ಸಹಾಯಕ ಸ್ಥಳಕ್ಕೆ ಬಂದು ಬರೆಗೆ ಟರ್ಪಾಲ್ ಹೊದಿಸಿರುವುದಾಗಿ ತಿಳಿದು ಬಂದಿದೆ.
ಮಣ್ಣು ಜರಿದು ರಸ್ತೆಗೆ ಬಿದ್ದ ಪರಿಣಾಮ ಚಾವಡಿಬಾಗಿಲು ಕಡೆಗೆ ಹೋಗುವ ರಸ್ತೆ ಬಂದ್ ಆಗಿರುವುದಾಗಿ ತಿಳಿದು ಬಂದಿದೆ.