ಎನ್ನೆಂಸಿ ನಿವೃತ್ತ ಅಟೆಂಡರ್ ಬಿ.ಚೋಮ ಬಾಜಿನಡ್ಕ ನಿಧನ

0

ಸುಳ್ಯ ನೆಹರೂ ಸ್ಮಾರಕ ಕಾಲೇಜ್ ನ ನಿವೃತ್ತ ಅಟೆಂಡರ್, ದೇವಚಳ್ಳ ಗ್ರಾಮದ ಬಾಜಿನಡ್ಕ ನಿವಾಸಿ ಬಿ.ಚೋಮರವರು ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ನಿನ್ನೆ ಮಧ್ಯಾಹ್ನ ಪೇಟೆಗೆ ಹೋಗಿದ್ದ ಅವರು ಹಿಂತಿರುಗುವಾಗ ತೀರಾ ಅಸ್ವಸ್ಥರಾಗಿ ಮನೆ ಸಮೀಪ ಕುಸಿದು ಕುಳಿತರು. ಕೂಡಲೇ ಮನೆಯವರು ಹೋಗಿ ಅವರನ್ನು ಕರೆತಂದು ಉಪಚರಿಸಿ, ವೈದ್ಯರನ್ನು ಕರೆತಂದರು. ಬಳಿಕ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಚೋಮರವರು ಪತ್ನಿ. ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.