







ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ಇದರ ವತಿಯಿಂದ ಜಾಲ್ಸೂರು ಗ್ರಾಮದ ಬೊಳುಬೈಲು ಈಶ್ವರಾಂಭ ಸಂಘದ ಸದಸ್ಯೆ ಶ್ರೀಮತಿ ಪುಷ್ಪಲತಾರವರ ಅತ್ತೆಯ ಅರೋಗ್ಯ ಸಮಸ್ಯೆಗೆ ಶ್ರೀ ಕ್ಷೇತ್ರದ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಸಹಾಯಧನ ಮೊತ್ತ ರೂಪಾಯಿ 30, 000ವನ್ನು ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ಜು.29ರಂದು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬೊಳುಬೈಲು ಒಕ್ಕೂಟದ ಅಧ್ಯಕ್ಷ ಪದ್ಮನಾಭ ನೆಕ್ರಾಜೆ ಸುಳ್ಯ ಯೋಜನಾ ಕಚೇರಿ ಪ್ರಬಂಧಕ ಅತೀಶ್ ದೇವಾಡಿಗ, ಜಾಲ್ಸೂರು ವಲಯದ ಮೇಲ್ವಿಚಾರಕ ತೀರ್ಥರಾಮ, ಸೇವಾಪ್ರತಿನಿಧಿ ಶ್ರೀಮತಿ ಸಂದ್ಯಾ ಉಪಸ್ಥಿತರಿದ್ದರು.









