ಹರಿಹರ ಪಲ್ಲತಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 15 ನೇ ವರ್ಷದ ಶ್ರೀ ಗಣೇಶೋತ್ಸವ ಸೆ.6 ರಿಂದ ಸೆ.8 ರ ವರೆಗೆ ನಡೆಯಿತು.









ಸೆ.6 ರಂದು ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ಸೆ.7 ರಂದು ಗಣೇಶನ ಮೂರ್ತಿ ಪ್ರತಿಷ್ಠೆ ನಂತರ ಶ್ರೀ ಗಣಪತಿ ಪೂಜೆ, ಸಾಮೂಹಿಕ ಶಕ್ತಿ ಸಂವೋಹನ , ಗಣಪತಿ ಹವನ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಭಜನಾ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕಲಾ ವೈಭವ ನಡೆಯಿತು. ಸೆ.8 ರಂದು ಶ್ರೀ ಗೌರಿ ಮತ್ತು ಗಣಪತಿ ದೇವರ ಮೆರವಣಿಗೆಯಲ್ಲಿ ಹರಿಹರೇಶ್ವರ ದೇವಾಲಯದಿಂದ ಹೊರಟು ಐನೆಕಿದು, ಕೋಟೆ, ಬಾಳುಗೋಡು, ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ ಜಲ ಸ್ತಂಭನ ನಡೆಯಿತು. ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಗಣೇಶೋತ್ಸವ ಸಮಿತಿ ಪ್ರಸನ್ನ ಗೋರ್ತಿಲ ಆದಿಯಾಗಿ ದೇವಸ್ಥಾನ ಮತ್ತು ಗಣೇಶೋತ್ಸವ ಸಮಿತಿಯವರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.









