ತಂಟೆಪ್ಪಾಡಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ

0

ಗ್ರಾಮಸ್ಥರಿಗೆ ಕ್ರೀಡಾಕೂಟ

ಸರ್ಕಾರಿ ಕಿ.ಪ್ರಾ.ಶಾಲೆ ತಂಟೆಪ್ಪಾಡಿ ಇಲ್ಲಿನ ಹಳೆ ವಿದ್ಯಾರ್ಥಿ ಸಂಘವು ಸುವರ್ಣ ಮಹೋತ್ಸವ ಆಚರಿಸುತಿದ್ದು ಆ ಪ್ರಯುಕ್ತ ಡಿ.15 ರಂದು ನಡೆಯಿತು.

ಕ್ರೀಡಾಕೂಟವನ್ನು ದೈ.ಶಿ. ಶಿಕ್ಷಕ ಲೊಕೇಶ್ ತಂಟೆಪ್ಪಾಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೇದಪ್ಪ ಗೌಡ ತಂಟೆಪ್ಪಾಡಿ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ಮುದ್ದಾಜೆ, ವೇದಿಕೆಯಲ್ಲಿ ಕ್ರೀಡಾ ಸಂಚಾಲಕ ಅನಂತ ಕೃಷ್ಣ ತಂಟೆಪ್ಪಾಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಷಪ್ಪ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಿಗೆ, ಕಳಂಜ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.