ಅಜ್ಜಾವರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗದ ಗಡಿ ಗುರುತು

0

ಅಜ್ಜಾವರ ಗ್ರಾಮದ ಬಂಟ್ರಬೈಲು ಎಂಬಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಎಕರೆ 25 ಸೆಂಟ್ಸ್ ಜಾಗದ ಗಡಿಗುರುತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹಲವಾರು ವರ್ಷ ಗಳ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಯವರಿಂದ ಜಾಗ ಮಂಜೂರು ಗೊಂಡಿತ್ತು. ಆದರೆ ಗಡಿ ಗುರುತು ಮಾಡಲು ಬಾಕಿ ಇದ್ದುದರಿಂದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ವಾಪಸು ಜಿಲ್ಲಾಧಿಕಾರಿ ಯವರಿಗೆ ಮನವಿ ಮಾಡಿದ ಮೇರೆಗೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಜ.8ರಂದು ಸುಳ್ಯ ತಹಶೀಲ್ದಾರ್ ಗ್ರಾಮ ಆಡಳಿತಧಿಕಾರಿ ಯವರಿಗೆ ಆದೇಶ ಮಾಡಿ ಮಂಜೂರು ಗೊಂಡ ಜಾಗವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಗಡಿ ಗುರುತು ಮಾಡಿ ಸ್ಥಳ ವನ್ನು ಹಸ್ತಾಂತರ ಮಾಡಲಾಯ್ತು.

ಈ ಸಂದರ್ಭದಲ್ಲಿ
ಸುಳ್ಯ ತಾಲ್ಲೂಕು ಅರೋಗ್ಯ ಅಧಿಕಾರಿ ಗಳಾದ ಡಾ. ನಂದಕುಮಾರ್, ಅಜ್ಜಾವರ ಗ್ರಾಮ ಆಡಳಿತ ಅಧಿಕಾರಿ , ಶ್ರೀಕಲಾ, ಪ್ರಾಥಮಿಕ ಅರೋಗ್ಯ ಸುರಕ್ಷ ಅಧಿಕಾರಿ ಒಮಾಶ್ರೀ, ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಹಾಲಿ ಸದಸ್ಯೆ ಲೀಲಾ ಮನಮೋಹನ್, ಪಂಚಾಯತ್ ಸದ್ಯಸರಾದ ರಾಹುಲ್ ಅಡ್ಪoಗಾಯ, ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳ, ಸುಳ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದ್ಯಸರಾದ ಅಬ್ಬಾಸ್ AB, ಅಡ್ಪoಗಾಯ,ಗ್ರಾಮ ಸಹಾಯಕರು, ಅರೋಗ್ಯ ಇಲಾಖೆಯಾ ಇತರ ಸಿಂಬ್ಬಂದಿ ವರ್ಗದವರು , ಗ್ರಾಮ ಪಂಚಾಯತ್ ಹಾಗೂ ಊರವರು ಉಪಸ್ಥಿತರಿದ್ದರು.