🔸ಸಾಮೂಹಿಕ ಆಶ್ಲೇಷ ಬಲಿ ಪೂಜೆ I ರಂಗ ಪೂಜೆ I ಸಾಂಸ್ಕೃತಿಕ ಸಂಭ್ರಮ
ಪಂಜ ಶ್ರೀ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಜ.31 ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ಜರುಗಲಿದೆ.









ಪೂ. ಗಂ 7 ರಿಂದ : ಗಣಪತಿಹೋಮ, ಪಂಚ ವಿಂಶತಿ ಕಲಶಪೂಜೆ, ಸಾಮೂಹಿಕ ಆಶ್ಲೇಷಬಲಿ ಪೂಜೆ, ಕಲಶಾಭಿಷೇಕ, ದೈವಗಳಿಗೆ ಮತ್ತು ನಾಗದೇವರಿಗೆ ತಂಬಿಲ. ಭಜನೆ,ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.ರಾತ್ರಿ ಗಂ, 8 ರಿಂದ : ಶ್ರೀ ದೇವರಿಗೆ ರಂಗಪೂಜೆ. ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಜ.30 ರಂದು ಮಧ್ಯಾಹ್ನ ದೇವಳಕ್ಕೆ ಹಸಿರು ಕಾಣಿಕೆ ಸಮರ್ಪಣೆ ಗೊಳ್ಳಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು :
ಸಂಜೆ ಗಂಟೆ 6 ರಿಂದ ಶ್ರೀ ಚಾಮುಂಡೇಶ್ವರಿ ಕುಣಿತಾ ಭಜನಾ ತಂಡ ಪಲ್ಲೋಡಿ ಇವರಿಂದ ಕುಣಿತ ಭಜನೆ.ರಾತ್ರಿ ಗಂಟೆ 7 ರಿಂದ 8ರ ತನಕ ಕು| ಸುಮಾ ಕೋಟೆ, ಪಂಜ ಇವರಿಂದ ಭಕ್ತಿಭಾವ ಸಂಭ್ರಮ.ರಾತ್ರಿ ಗಂಟೆ 8:30 ರಿಂದ 11:30ರ ತನಕ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಇದರ ಅಧ್ಯಯನ ಕೇಂದ್ರ ಕಲಾ ಕ್ಷೇತ್ರ ಪಂಜ ಇಲ್ಲಿನ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ ಕದಂಬ ಕೌಶಿಕೆ ಪ್ರದರ್ಶನ ಗೊಳ್ಳಲಿದೆ.









