ಸಂಪಾಜೆ ಆರ್‌ಎಂಎಸ್ ಎ ಮುಖ್ಯ ಶಿಕ್ಷಕಿ ಚಂದ್ರಾವತಿಯವರಿಗೆ ಬೀಳ್ಕೊಡುಗೆ

0

ಸಂಪಾಜೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರ್‌ಎಂಎಸ್‌ಎ ಇಲ್ಲಿಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಶ್ರೀಮತಿ ಚಂದ್ರಾವತಿಯವರು ಜ.೩೧ರಂದು ನಿವೃತ್ತರಾಗಿದ್ದು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.


ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಮ್ಮದ್ ಹನೀಫ್ ಹೆಚ್.ಎ. ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಚಂದ್ರಾವತಿಯವರನ್ನು ಸನ್ಮಾನಿಸಲಾಯಿತು.


ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ., ಹಿಂದೆ ಸುಳ್ಯದಲ್ಲಿ ಬಿ.ಇ.ಒ. ಆಗಿದ್ದು, ಪ್ರಸ್ತುತ ಹುಣಸೂರು ಬಿ.ಇ.ಒ. ಆಗಿರುವ ಎಸ್.ಪಿ. ಮಹಾದೇವ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಪಂಚಾಯತ್ ಸದಸ್ಯರುಗಳಾದ ಜಿ.ಕೆ.ಹಮೀದ್, ರಜನಿ, ಎಸ್.ಕೆ.ಹನೀಫ್, ಸುಂದರಿ ಮುಂಡಡ್ಕ, ಸಂಪಾಜೆ ಸಹಕಾರ ಸಂಘದ ಉಪಾಧ್ಯಕ್ಷೆ ಯಮುನಾ ಬಿ.ಎಸ್. ಸುಳ್ಯ ಸಿ.ಡಿ.ಪಿ.ಒ. ಶೈಲಜಾ ದಿನೇಶ್, ಸುಳ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕಜೆಮೂಲೆ, ಕೋಶಾಧಿಕಾರಿ ಶೀಲಾವತಿ, ದಾನಿಗಳಾದ ನಾರಾಯಣ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಕಾಂತಿ ಬಿ.ಎಸ್., ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ರಾಜಗೋಪಾಲ ಉಳುವಾರು, ನಿವೃತ್ತ ಪೋಲೀಸ್ ಅಧಿಕಾರಿ ಶ್ರೀಧರ, ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ, ಪ್ರೌಢಶಾಲಾ ಸ್‌ಡಿಎಂಸಿ ಅಧ್ಯಕ್ಷೆ ಅನಿತಾ, ನ್ಯೂಸ್ ನಾಟೌಟ್ ಸಂಪಾದಕ ಹೇಮಂತ್ ಸಂಪಾಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್ ಮೊದಲಾದವರು ವೇದಿಕೆಯಲ್ಲಿದ್ದರು.


ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬನ ಅಭಿನಂದನಾ ಭಾಷಣ ಮಾಡಿದರು.
ಪ್ರಭಾರ ಮುಖ್ಯ ಶಿಕ್ಷಕಿ ಚಂದ್ರಾವತಿ ಪಿ.ಎಂ. ಸ್ವಾಗತಿಸಿದರು. ಶಿಕ್ಷಕರಾದ ಇಂದಿರಾ ಹಾಗೂ ರೋಹಿಣಿ ಅನಿಸಿಕೆ ವ್ಯಕ್ತ ಪಡಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಯಶ್ರೀ ವಂದಿಸಿದರು. ಶಿಕ್ಷಕರಾದ ಕಮಲಾಕ್ಷ ಹಾಗೂ ಸುಜಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಿವೃತ್ತರಾದ ಶಿಕ್ಷಕಿ ಚಂದ್ರಾವತಿಯವರನ್ನು ಮೆರವಣಿಗೆಯ ಮೂಲಕ ಸಭಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನಿವೃತ್ತ ಶಿಕ್ಷಕರು ನೆನಪಿನ ಕಾಣಿಕೆಯಾಗಿ ಶಾಲೆಗೆ ಕಪಾಟನ್ನು ನೀಡಿದರು. ಹಾಗೂ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿದರು.