
ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ವಾರ್ಷಿಕ ಮಹೋತ್ಸವವು ಫೆ.2 ರಿಂದ ಫೆ..5 ರ ವರೆಗೆ ನಡೆಯಿತು.
ಫೆ.2 ರ ಮಧ್ಯಾಹ್ನ ಹಸಿರುವಾಣಿ ಸಮರ್ಪಣೆ ನಡೆದಿದ್ದು . ಫೆ.3 ರಂದು ಬೆಳಗ್ಗೆ ಶ್ರೀ ಗಣಪತಿಹವನ, ಕಲಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆ ವಿವಿಧ ತಂಡಗಳಿಂದ ಭಜನೆ ನಡೆಯಿತು., ಸಂಜೆ ಕುಣಿತ ಭಜನೆ ನಡೆದಿದ್ದು
ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆದಿದ್ದು ಬಳಿಕ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಮತ್ತು ಶಾಲಾ ಮಕ್ಕಳಿಂದ ಮತ್ತು ಊರವರಿಂದ “ಸಾಂಸ್ಕೃತಿಕ ವೈಭವ” ನಡೆಯಿತು. ಅನ್ನಸಂತರ್ಪಣೆ ನಡೆದು ಶ್ರೀಮತಿ ಅಕ್ಷತಾ ಮುರಳೀಕೃಷ್ಣ ಭಟ್ ವಳಲಂಬೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತ್ತು
. ಆರುಹಿ ಆರ್ಟ್ ಫೌಂಡೇಶನ್ ಮತ್ತು ಶಿಷ್ಯ ವೃಂದದವರಿಂದ ನೃತ್ಯ ಪ್ರಸ್ತುತಿ ನಡೆಯಿತು.















ಫೆ.4 ರ ಬೆಳಗ್ಗೆ ದೇವಸ್ಥಾನದಲ್ಲಿ ದೈವಗಳ ನೇಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಅಪರಾಹ್ನ ದೇವಸ್ಥಾನದಿಂದ ಮಿತ್ತೋಡಿ ಚಾವಡಿಗೆ ಭಂಡಾರ ಹೋಗಿ ಮರುದಿನ ನೇಮ ನಡೆಯಿತು. . ಫೆ.4 ರ ರಾತ್ರಿ ಶ್ರೀ ಅಗ್ನಿಗುಳಿಗ ರಾಜ ದೈವದ ನೇಮೋತ್ಸವ ಗಾಣಿಗಮಜಲು ಚಾಳೆಪ್ಪಾಡಿ ಇಲ್ಲಿ ನಡೆಯಿತು.
.
ಜಾತ್ರೋತ್ಸವ ಯಶಸ್ವಿಗೆ ಆಡಳಿತಾಧಿಕಾರಿ ಮೋಹನ ಕೆ, ಅರ್ಚಕ ಕೃಷ್ಣಮೂರ್ತಿ ಭಟ್, ಸೇವಾ ಸಮಿತಿಯ ಅಧ್ಯಕ್ಷ ಮಣಿಕಂಠ ಕೊಳಗೆ, ಪ್ರಧಾನ ಕಾರ್ಯದರ್ಶಿ ಎನ್.ಜಿ ಬಾಲಸುಬ್ರಹ್ಮಣ್ಯ, ಗೌರವಾಧ್ಯಕ್ಷ ನಾರಾಯಣಯ್ಯ ಕಟ್ಟ, ಜತೆ ಕಾರ್ಯದರ್ಶಿ ಹೇಮಂತ ದೋಲನಮನೆ, ಉಪಾಧ್ಯಕ್ಷ ಗೋಪಾಲಕೃಷ್ಣ ಭಟ್ ಕೇಮಾಟಿ, ವಿವಿಧ ಸೇವಾ ಸಮಿತಿಯವರು, ಭಕ್ತಾಧಿಗಳು ಸಹಕರಿಸಿದರು.










