ಎಡಮಂಗಲ ಜಾತ್ರೋತ್ಸವ ನಿರಂತರ ಶ್ರಮದಾನ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಶಿಷ್ಟ ಪ್ರಕಾರ ಫೆ 12ರಿಂದ 18ರ ವರೆಗೆ ಐದು ದಿವಸಗಳ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು,ಆ ಪ್ರಯುಕ್ತ ಕೂಡು ಕಟ್ಟು ಭಕ್ತಾಧಿಗಳಿಂದ ನಿರಂತರ ಸ್ವಚ್ಛತೆ ಮೂಲಕ ಶ್ರಮದಾನ ನಡೆಯುತ್ತಿದೆ. ನಾಲ್ಕು ಗ್ರಾಮ ಒಂಬತ್ತು ಉತ್ತರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.ಪ್ರತಿದಿನ ಸಂಜೆಯ ಬಳಿಕ ಶ್ರಮದಾನ ನಡೆಯಲಿರುವುದೆಂದು ದೇವಳದ ಪ್ರಕಟಣೆ ತಿಳಿಸಿದೆ.