ಹಜ್ಜ್ ಕಮೀಟಿ ಆಫ್ ಇಂಡಿಯಾ ನಡೆಸಿರುವ ರಾಷ್ಟ್ರ ಮಟ್ಟದ ಹಜ್ಜ್ ತರಬೇತುದಾರರ ಪರೀಕ್ಷೆಯಲ್ಲಿ ಹಾಜಿ ಶರೀಫ್ ಭಾರತ್ ಬಾಳಿಲ ಅವರು ಉತ್ತೀರ್ಣರಾಗಿ ಇಂಡಿಯನ್ ಹಜ್ಜ್ ಟ್ರೈನರಾಗಿ ಆಯ್ಕೆಯಾಗಿದ್ದಾರೆ.ಭಾರತದಿಂದ ಹಜ್ಜ್ ಯಾತ್ರೆ ಕೈಗೊಳ್ಳುವವರಿಗೆ ವಿಶೇಷವಾದ ತರಬೇತು ನೀಡುವ ಸಲುವಾಗಿ ಈ ವರ್ಷವು ಹಜ್ಜ್ ಕಮೀಟಿ ಆಫ್ ಇಂಡಿಯಾ ವತಿಯಿಂದ ರಾಷ್ಟ್ರ ಮಟ್ಟದ ಹಜ್ಜ್ ತರಬೇತುದಾರರ ಪರೀಕ್ಷೆಯನ್ನು ನಡೆಸಿರುತ್ತಾರೆ.ಭಾರತದ ವಿವಿಧ ಸೆಂಟರ್ ನಲ್ಲಿ ಏಕಕಾಲಕ್ಕೆ ನಡೆದ ಪರೀಕ್ಷೆಯಲ್ಲಿ ಇವರು ಮೈಸೂರು ಸೆಂಟರ್ ನಲ್ಲಿ ಪರೀಕ್ಷೆಯನ್ನು ಬರೆದಿರುತ್ತಾರೆ.









ದಕ್ಷಿಣ ಕನ್ನಡ ಜಿಲ್ಲೆಯಿಂದ ಏಕೈಕ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾದ ಇವರು ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿ ರಾಷ್ಟ್ರೀಯ ಹಜ್ಜ್ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ.ಇವರು ದೆಹಲಿಯಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡು ಈ ವರ್ಷ ಹಜ್ಜ್ ಕಮೀಟಿ ಆಫ್ ಇಂಡಿಯಾ ಮೂಲಕ ಹಜ್ಜ್ ಯಾತ್ರೆ ಕೈಗೊಳ್ಳುವವರಿಗೆ ವಿಶೇಷವಾದ ತರಭೇತಿಯನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.ಭಾರತೀಯ ಹಜ್ಜ್ ಕಮೀಟಿ ಮೂಲಕ ಕಳೆದ ವರ್ಷ ಇವರು ಹಜ್ಜ್ ಯಾತ್ರೆಯನ್ನು ಕೈಗೊಂಡಿರುತ್ತಾರೆ.










