ಫೆ.15 : ಹರಿಹರೇಶ್ವರ ದೇವಳದಲ್ಲಿ ಲೇಖಕಿ ಲಲಿತಾಜ ಮಲ್ಲಾರ ರ ಸಾಹಿತ್ಯ ವಿಚಾರ ಮಂಡನೆ

0

ಸಂಧ್ಯಾ ರಶ್ಮಿ ಸಾಹಿತ್ಯ ಸಂಘದ ತಿಂಗಳ ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮವು ಫೆ.15 ರಂದು ಹರಿಹರೇಶ್ವರ ದೇವಳದ ಸಭಾಭವನದಲ್ಲಿ ನಡೆಯಲಿದೆ.

ಲೇಖಕಿ ಶ್ರೀಮತಿ ಲಲಿತಾಜ ಮಲ್ಲಾರ ರವರ ಸಾಹಿತ್ಯ ಕುರಿತು ಲೇಖಕ ಕುಮಾರಸ್ವಾಮಿ ತೆಕ್ಕುಂಜ ವಿಚಾರ ಮಂಡಿಸಲಿದ್ದಾರೆ. ಲೇಖಕಿ ತಾರಾಮತಿ ಕಜ್ಜೋಡಿ ವ್ಯಕ್ತಿ ಪರಿಚಯ ಮಾಡಲಿರುವರು. ಗಾಯಕ ಕೆ.ಆರ್. ಗೋಪಾಲಕೃಷ್ಣ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಂಘದ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿರುವರು. ಅತಿಥಿಗಳಾಗಿ ಕಿಶೋರ್ ಕುಮಾರ್ ಕೂಜುಗೋಡು, ಡಾ.ಎಸ್.ರಂಗಯ್ಯ, ಬಾಬು ಗೌಡ ಅಚ್ರಪ್ಪಾಡಿ ಭಾಗವಹಿಸಲಿರುವರು.