ಹಳೆಗೇಟು: ಮರದ ಮಿಲ್ ಬಳಿ ತೋಟದಲ್ಲಿ ಅಗ್ನಿ ಅವಘಡ

0

ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ

ಹಳೆಗೇಟು ಜಯನಗರ ರಸ್ತೆ ಮರದ ಮಿಲ್ ಬಳಿ ಅಗ್ನಿ ಅವಘಡ ಉಂಟಾಗಿ ರಸ್ತೆ ಪಕ್ಕದ ತೋಟಕ್ಕೆ ಬೆಂಕಿ ವ್ಯಾಪಿಸಿದ ಘಟನೆ ಫೆ 9 ರಂದು ಸಂಭವಿಸಿದೆ.

ರಸ್ತೆ ಬದಿಯ ವಿದ್ಯುತ್ ಲೈನ್ ನಿಂದ ಅವಘಡ ಸಂಭವಿಸಿರಬಹುದು ಎಂದು ಊಹಿಸಲಾಗಿದೆ.

ಘಟನೆ ವೇಳೆ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದು ಬಳಿಕ ಹತೋಟಿಗೆ ಬಾರದಾಗ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ ಹಿನ್ನಲೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.