ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆ ಅಭಿವೃದ್ಧಿಗೆ 45 ಲಕ್ಷ: ಶಾಸಕಿ ಭಾಗೀರಥಿ ಮುರುಳ್ಯ

ದುಗ್ಗಲಡ್ಕ ಪೇಟೆಯಲ್ಲಿ ನಗರ ಪಂಚಾಯತ್ ನ 9 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಸಾರ್ವಜನಿಕ ಶೌಚಾಲಯದ ಉದ್ಘಾಟನೆ ಮತ್ತು ದುಗ್ಗಲಡ್ಕ ದೈವಸ್ಥಾನಕ್ಕೆ ಭಂಡಾರ ಬರುವ ರಸ್ತೆಗೆ ನ.ಪಂ.ನ ಸ್ಚಚ್ಚ ಭಾರತ್ ಅನುದಾನದಲ್ಲಿ ರೂ.5 ಲಕ್ಷ ಮೊತ್ತದ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕಿ ಭಾಗೀರಥಿ ಮುರುಳ್ಯ ಇಂದು ಗುದ್ದಲಿಪೂಜೆ ನೆರವೇರಿಸಿದರು.

ನೂತನ ಶೌಚಾಲಯದ ನಾಮ ಫಲಕವನ್ನು ಶಾಸಕಿ ಭಾಗೀರಥಿ ಮುರುಳ್ಯ ಅನಾವರಣ ಮಾಡಿದರೆ, ನಗರ ಪಂಚಾಯತ್ ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯೆಯಾದ ಶಶಿಕಲಾ ಎ.ನೀರಬಿದಿರೆ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.








ಬಳಿಕ ಮಾತನಾಡಿದ ಶಾಸಕರು ಈ ಭಾಗದ ಜನರ ಬಹು ಬೇಡಿಕೆಯಾದ ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ.45 ಲಕ್ಷ ಅನುದಾನ ಮಂಜೂರಾಗಿದೆ. ಶೀಘ್ರವಾಗಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್,ಮುಖ್ಯಾಧಿಕಾರಿ ಸುಧಾಕರ್,ನ.ಪಂ.ಸದಸ್ಯ ವಿನಯಕುಮಾರ್ ಕಂದಡ್ಕ, ನಾಮ ನಿರ್ದೇಶನ ಸದಸ್ಯ ರಾಜು ಪಂಡಿತ್, ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ, ಪ್ರಮುಖರಾದ ಕುಸುಮಾಧರ ಎ.ಟಿ, ಶ್ರೀಕಾಂತ್ ಮಾವಿನಕಟ್ಟೆ, ದಯಾನಂದ ಸಾಲಿಯಾನ್, ಕಜೆ ಕುಶಾಲಪ್ಪ ಗೌಡ,ದಿನೇಶ್ ಡಿ.ಕೆ., ಹೇಮಂತ್ ಕುಮಾರ್ ಕಂದಡ್ಕ,ಧನಂಜಯ (ಮನು) ದುಗ್ಗಲಡ್ಕ, ಶಿವಪ್ರಸಾದ್ ಕುದ್ಪಾಜೆ,ಶಿವಕುಮಾರ್ ಕಂದಡ್ಕ,ಗಿರೀಶ್ ಮೂಡೆಕಲ್ಲು ,ಮತ್ತಿತರರು, ನ.ಪಂ.ಸಿಬ್ಬಂದಿಗಳು, ಕಂಟ್ರಾಕ್ಟರ್ ಗಳು ಉಪಸ್ಥಿತರಿದ್ದರು.










