ಪೆರಾಜೆ :ಗಡಿನಾಡ ಕನ್ನಡಿಗರ ಸ್ನೇಹ ಸಮ್ಮಿಲನ, ವಿವಿಧ ಸವಲತ್ತು ವಿತರಣೆ ಹಾಗೂ ಪ್ರಶಸ್ತಿ ಪ್ರದಾನ

0

ಸಚಿವ ಸತೀಶ್ ಜಾರಕಿಹೊಳಿ, ಚಿತ್ರನಟ ಚೇತನ್ ರವರು ಭಾಗಿ, ಸಂಘಟನೆಯ ಕಾರ್ಯಟುವಟಿಕೆಗಳ ಬಗ್ಗೆ ಶ್ಲಾಘನೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 50 ರ ಸಂಭ್ರಮ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಫೆ. 16 ರಂದು ಪೆರಾಜೆಯ ಕನ್ನಡ ಪೆರಾಜೆ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಆಗಮಿಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಹಮ್ಮಿಕ್ಕೊಂಡಿದ್ದ ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದು ಸಾಮಾಜಿಕ, ಅರೋಗ್ಯ,ಮಾಧ್ಯಮ, ಕ್ರೀಡಾ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಸಾಮಾಜಿಕ ಕ್ಷೇತ್ರದಿಂದ ಹಾಜಿ ಉಮ್ಮರ್ ಬೆಂಗಳೂರು,ಟಿ ಎಂ ಶಹೀದ್ ತೆಕ್ಕಿಲ್,ಅಬ್ದುಲ್ ರಹಿಮಾನ್ ಸಂಕೇಶ್, ಶಾಹುಲ್ ಹಮೀದ್ ಕುತ್ತಮೊಟ್ಟೆ,ಶಶಿ ಕಿರಣ್, ಚೇತನ್ ಅಹಿಂಸಾ,ಸಾಜೀದ್ ಐ ಜಿ ಗೂನಡ್ಕ, ಫೈಝಲ್ ಕೆಟ್ಟೆಕ್ಕಾರ್ಸ್, ನಝಿರ್ ಕೊಯ್ನಡು,ಹನೀಫ್ ಅರೋಗ್ಯ ಡಾ. ಭವ್ಯ ಕೆವಿಜಿ,ಜಾಬೀರ್ ನಿಜಾಮಿ,ಕರೀಂ ಕೆದ್ಕಾರ್ ಪತ್ರಿಕಾರಂಗದಲ್ಲಿ ಹರೀಶ್ ಬಂಟ್ವಾಳ್, ಹಸೈನಾರ್ ಜಯನಗರ, ಸಂಶೀರ್ ಬುಡೋಳಿ, ಮೊದಲಾದವರು ಪ್ರಶಸ್ತಿ ಸನ್ಮಾನ ಸ್ವೀಕರಿಸಿದರು.

ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಸಮಿತಿಯು ಈ ಭಾಗದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಮತ್ತು ಬೆಳೆಸುವ ಉದ್ದೇಶದಿಂದ ಮಾಡುತ್ತಿರುವ ಈ ಕಾರ್ಯ ಚಟುವಟಿಕೆಗಳು ಬಹಳ ಉತ್ತಮವಾದದ್ದು. ಕೇವಲ ಬಣ್ಣದ ಮಾತುಗಳಿಂದ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಅದಕ್ಕೆ ಈ ರೀತಿಯ ಸಂಘಟನೆಗಳ ಶ್ರಮ ಮತ್ತು ಕಾರ್ಯಗಳ ಅವಶ್ಯಕತೆಗಳು ಇರುತ್ತದೆ. ಇಂತಹ ಸಂಘಟನೆಗಳನ್ನು ಸರಕಾರಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ರಾಜಧ್ಯಕ್ಷರಾದ ಶಶಿ ಕಿರಣ್ B, ರಾಜ್ಯ ಸಮಿತಿ ಕಾರ್ಯದರ್ಶಿಯಾದ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಕುಮಾರ್ ಗೌಡ, ರಾಜ್ಯ ಕಾರ್ಮಿಕ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ರಾಜ್ಯ ಉಪ ಕಾರ್ಯದರ್ಶಿ ಮೋಹನ್ ಕುಮಾರ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ T M ಶಹೀದ್, ಉದ್ಯಮಿ ಅಬ್ಬುಲ್ ರಹಮಾನ್‌ ಸಂಕೇಶ್,ಮಹಮ್ಮದ್ ಇಕ್ಬಾಲ್ ಎಲಿಮಲೆ,ಸುಳ್ಯ ನ ಪಂ ಸದಸ್ಯರುಗಳಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ನಾಮ ನಿರ್ದೇಶಕ ಸದಸ್ಯರುಗಳಾದ ಸಿದ್ದೀಕ್ ಕೋಕ್ಕೊ,ರಾಜು ಪಂಡಿತ್, ಗ್ರಾ ಪಂ ಮಾಜಿ ಅಧ್ಯಕ್ಷ ಜಿ ಕೆ ಹಮೀದ್, ಸದಸ್ಯ ಹನೀಫ್ ಎಸ್ ಕೆ,ಖ್ಯಾತ ಗಾಯಕ ಅಶ್ರಫ್ ಸವಣೂರು,ಮತ್ತು ಸಮದ್ ಗಡಿಯಾರ್ ಅಲ್ಲದೆ ಹಲವಾರು ಗಣ್ಯರುಗಳು ಉಪಸ್ಥಿತರಿದ್ದರು.
ಜಿಲ್ಲಾ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಘಟಕ ಉನೈಸ್ ಪೆರಾಜೆ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.
ನೌಫಾಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿ ಅಡ್ವಕೆಟ್ ಭಾಷಿತ್ ವಂದಿಸಿದರು.

ಜುನೈದ್, ಹಾಗೂ ಮಹಮ್ಮದ್ ಕ್ರೀಡಾ ಕಾರ್ಯಕ್ರಮ ನಡೆಸಿ, ಸಿದ್ದೀಕ್ ಗೂನಡ್ಕ ಮುನೀರ್ ಪಿ ಕೆ, ಶಿಹಾಬ್ ಪೆರಾಜೆ ರಕ್ತದಾನ ಶಿಬಿರದಲ್ಲಿ ಹಾಗೂ ಸ್ಥಳೀಯ ಇನ್ನೂ ಹಲವಾರು ಯುವಕರುಗಳು ಸಹಕರಿಸಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದ ತಂಡದ ಸದಸ್ಯರುಗಳಿಗೆ ಬಹುಮಾನ ವಿತರಣೆ ನಡೆಯಿತು.