ಸುಳ್ಯ – ಕೇರಳದ ಗಡಿಪ್ರದೇಶವಾದ ಬಂದಡ್ಕಡ್ಕದ
ಪಾಲಾರ್ ಗುಂಡ್ಯ ಶ್ರೀ ವಿಷ್ಣುಮೂರ್ತಿ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಮತ್ತು ದೈವಗಳ ಧರ್ಮ ನಡಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ. 16ರಂದು ನಡೆಯಿತು.
ಕಾರ್ಯಕ್ರಮವು ಮಾ. 28ರಿಂದ ಎ01ರವರೆಗೆ ನಡೆಯಲಿದೆ.









ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟುಂಬದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುರೇಶ್ ಪಿ ಜಿ ವಹಿಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಪಿ ಜಿ ಸ್ವಾಗತಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಕುಟುಂಬದ ಹಿರಿಯರುಗಳಾದ ಸುಂದರ ಗೌಡ, ಬಾಲಕೃಷ್ಣ ಮಾಸ್ಟರ್, ಬಾಬು ಗೌಡ ಸಮಿತಿಯ ಉಪಾಧ್ಯಕ್ಷರಾದ ಉದಯಕುಮಾರ್, ವಿಶ್ವನಾಥ ಕಾರ್ಯದರ್ಶಿಗಳಾದ ಲಕ್ಷ್ಮಣ ಪಿಜಿ , ಪುರುಷೋತ್ತಮ, ಯತಿಶ ಮತ್ತು ಕೋಶಾಧಿಕಾರಿ ಮನೋಹರ ರವರು ಹಾಗೂ ಸಮಿತಿಯ ಸದಸ್ಯರು ಸದಸ್ಯೆಯರು ಭಾಗವಹಿಸಿದರು.
ಶರತ್ ಪಿ. ಜಿ. ವಂದಿಸಿದರು.










