ದ.ಕ.ಜಿಲ್ಲಾ 27 ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಶಿಶಿಲರಿಗೆ ಹಿರಿಯ ವಿದ್ಯಾರ್ಥಿಗಳಿಂದ ಗೌರವ

0

ಫೆ.21 ಮತ್ತು 22ರಂದು ಮಂಗಳೂರಿನಲ್ಲಿ ನಡೆಯುವ 27 ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಶ್ರಾಂತ ಪ್ರಾಂಶುಪಾಲರು, ಸಾಹಿತಿಗಳಾದ ಡಾ. ಪ್ರಭಾಕರ ಶಿಶಿಲರನ್ನು ಎನ್ನೆಂಸಿಯ ಹಿರಿಯ ವಿದ್ಯಾರ್ಥಿಗಳು, ಅವರ ಶಿಷ್ಯರಾದ ಚಂದ್ರಾ ಕೋಲ್ಚಾರ್, ಎಸ್.ಆರ್.ಸೂರಯ್ಯ, ಸದಾನಂದ ಮಾವಜಿ, ದಿನೇಶ್ ಮಡಪ್ಪಾಡಿ, ಕೆ.ಟಿ.‌ವಿಶ್ವನಾಥ, ದಿನೇಶ್ ಕೋಲ್ಚಾರ್, ಸುಪ್ರೀತ್ ಮೋಂಟಡ್ಕ, ಪ್ರೀತಮ್ ಡಿ.ಕೆ. ಯವರು ಅವರ‌ ಮನೆಗೆ ತೆರಳಿ ಗೌರವ ಸಲ್ಲಿಸಿದರು. ಡಾ.ಶಿಶಿಲ ಪತ್ನಿ ಶ್ರೀಮತಿ ಶೈಲಿ ಪ್ರಭಾಕರ್ ಉಪಸ್ಥಿತರಿದ್ದರು.