
ಸ.ಹಿ ಪ್ರಾ ಶಾಲೆ ಮುರುಳ್ಯ ಶಾಂತಿ ನಗರದಲ್ಲಿ ಫೆ. 18ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಸಮೂಹ ಸಂಪನ್ಮೂಲ ಕೇಂದ್ರ ಪಂಜ ಇವರ ವತಿಯಿಂದ ಏಣ್ಮೂರು ಕ್ಲಸ್ಟರ್ ಮಟ್ಟದ ಒಟ್ಟು 11 ಸರಕಾರಿ ಶಾಲೆಗಳ ಭಾಗವಹಿಸುವಿಕೆಯಲ್ಲಿ ಕಲಿಕಾ ಹಬ್ಬ ನಡೆಯಿತು.
ಬೆಳಿಗ್ಗೆ ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ ವಿಜ್ಞಾನ ಮಾದರಿಗಳನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾ.ಪಂ ಉಪಾಧ್ಯಕ್ಷೆ ಕು. ಜಾನಕಿ ಮುರುಳ್ಯ ವಹಿಸಿದ್ದರು.
















ವೇದಿಕೆಯಲ್ಲಿ ಗ್ರಾ.ಪಂ ಸದಸ್ಯೆ ಶ್ರೀಮತಿ ಶೀಲಾವತಿ ಗೊಳ್ತಿಲ ಪಂಜ ವಲಯ ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ ಸಿ.ಆರ್.ಪಿ ಜಯಂತ ಕಳತ್ತಜೆ, ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ ನಡುಬೈಲು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರೋಜಿನಿ,
ಪ್ರಾಥಮಿಕ ಶಾಲಾ ತಾಲೂಕು ಮಟ್ಟದ ಜಿಪಿಟಿ ಶಿಕ್ಷಕರ ಸಂಘದ ನಿರ್ದೇಶಕಿ ಶ್ರೀಮತಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೂಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ ನಡುಬೈಲು ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಮುಖ್ಯಶಿಕ್ಷಕಿ ಲೀಲಾವತಿ ರಾಘವ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಂತಿಕಲ್ಲು ವಲಯದ ಮೇಲ್ವಿಚಾರಕಿ ಶ್ರೀಮತಿ ಹೇಮಲತಾ, ಸಿ.ಆರ್.ಪಿ ಜಯಂತ ಕಳತ್ತಜೆ ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರೋಜಿನಿ,
ಪ್ರಾಥಮಿಕ ಶಾಲಾ ತಾಲೂಕು ಮಟ್ಟದ ಜಿಪಿಟಿ ಶಿಕ್ಷಕರ ಸಂಘದ ನಿರ್ದೇಶಕಿ ಶ್ರೀಮತಿ ನಳಿನಾಕ್ಷಿ ಉಪಸ್ಥಿತರಿದ್ದರು.
ಮುರುಳ್ಯ ಶಾಂತಿ ನಗರ ಶಾಲೆಗೆ ಕಥೆ ಕಟ್ಟುವುದರಲ್ಲಿ ಪ್ರಥಮ, ಗಟ್ಟಿ ಓದುವುದು ದ್ವೀತಿಯ, ಜ್ಞಾಪಕ ಶಕ್ತಿ ಚಟುವಟಿಕೆಯಲ್ಲಿ ದ್ವೀತಿಯ, ಕಥೆ ಹೇಳುವುದು ತೃತೀಯ, ಸುಂದರ ಕೈಬರಹ ತೃತೀಯ ಹೀಗೆ 5 ಬಹುಮಾನ ದೊರೆಯಿತು.










