ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವ ಸಮಿತಿಯ ವಿಶೇಷ ಸಭೆಯು ಫೆ. 19ರಂದು ದೇವಸ್ಥಾನದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಪಿ. ಎಸ್ ಗಂಗಾಧರರ ಅಧ್ಯಕ್ಷತೆ ಯಲ್ಲಿ ನಡೆಯಿತು.















ಆಮಂತ್ರಣ ಪತ್ರವನ್ನು ಫೆ. 23ರೋಳಗೆ ಪ್ರತಿ ಮನೆಗೆ ತಲುಪಿಸುವುದು. ಮತ್ತು ಗೊನೆ ಮುಹೂರ್ತ ದಿನ ಫೆ 25ರಂದು ಸಮಿತಿಯ ಎಲ್ಲ ಪದಾಧಿಕಾರಿಗಳು ಭಾಗವಹಿಸುವದು. ಮರುದಿನ ರಾತ್ರಿ ನಡೆಯುವ ಶಿವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಮತ್ತು ವರ್ಷಾವಧಿ ಜಾತ್ರೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ಸಮಿತಿಯವರು ಒಗ್ಗೂಡಿ ಕೆಲಸ ಮಾಡಲು ಭಾಗಹಿಸಿದ ಎಲ್ಲರೂ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ವ್ಯವಸ್ಥಾಪನ ಸಮಿತಿಯವರು, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾ ರು ಸಮಿತಿಯವರು,ಅರ್ಚಕರು ಭಾಗವಹಿದ್ದರು.ಕೊನೆಯಲ್ಲಿ ಸಂಚಾಲಕರಾದ ವಿಜಯಕುಮಾರ್ ಧನ್ಯವಾದಗೈದರು.










