ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ ಲೇಸರ್ ಇನ್ ಡೆಂಟಿಸ್ಟ್ರೀ ಕಾರ್ಯಗಾರ

0

ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜಿನ ಪರಿದಂತ (Periodontics) ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಲೇಸರ್ ಇನ್ ಡೆಂಟಿಸ್ಟ್ರೀ: ಇನ್ನೋವೇಶನ್ ಇನ್ ಆಕ್ಶನ್ ಎಂಬ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.


ಸಂಪನ್ಮೂಲ ವ್ಯಕ್ತಿಯಾಗಿ ಮುಂಬೈಯ ಪ್ರಸಿದ್ಧ ದಂತ ವೈದ್ಯೆ ಡಾ| ನಾಮೀ ಸವಿ ಜುನೇಜಾರವರು ತರಬೇತಿ ನೀಡಿದರು. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಹಳಷ್ಟು ಚಿಕಿತ್ಸಾ ವಿಧಾನಗಳನ್ನು ಪ್ರಸ್ತುತಪಡಿಸಲಾಯಿತು.


ಸಮಾರಂಭದ ಆರಂಭದಲ್ಲಿ ಪರಿದಂತ ವಿಭಾಗ ಮುಖ್ಯಸ್ಥರಾದ ಡಾ| ಎಂ.ಎಂ. ದಯಾಕರ್ ಅವರು ಎಲ್ಲರನ್ನು ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ರವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರೂಪ್ ಫಾರ್ಮಸುಟಿಕಲ್ಸ್ ನ Seಟಿioಡಿ ಇxeಛಿuಣive ಆದ ಡಾ| ರಮಾನಂದ ಶೆಟ್ಟಿಯವರು ಉಪಸ್ಥಿತರಿದ್ದರು. ಹಾಗೂ ಬೃಹತ್ ಗಾತ್ರದ Smart TV ಯನ್ನು ಕಾಲೇಜಿಗೆ ಉಡುಗೊರೆಯಾಗಿ ನೀಡಿದರು. Smart TV ಆಧುನಿಕ ಸಾಫ್ಟ್‌ವೇರ್ ಹೊಂದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ. ಈ ಒಂದು ಕಾರ್ಯಗಾರದಲ್ಲಿ ಒಟ್ಟು ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಸ್ತ್ರಚಿಕಿತ್ಸೆಯನ್ನು ರೋಗಿಗಳ ಮೇಲೆ ಹಾಗೂ ಅದರ ನೇರ ಪ್ರಸಾರವನ್ನು ಆಧುನಿಕ ತಂತ್ರಜ್ಞಾನ (Audio-Visual aid) ಬಳಸಿ ಉಳಿದ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯ ಪರಿಚಯನ್ನು ಡಾ. ಶಿಲ್ಪರವರು ಮಾಡಿದರು ಹಾಗೂ ಕೊನೆಯಲ್ಲಿ ಡಾ. ಶಿವಾನಂದ ಹೆಚ್. ವಂದನಾರ್ಪಣೆಗೈದರು. ಡಾ. ಪ್ರಕಾಶ್ ಪೈಯವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಡಾ. ಅಮೃತ ಭಟ್ ಪ್ರಾರ್ಥನೆಗೈದರು. ಡಾ. ಪೂಜಾ ಹಾಗೂ ಡಾ. ಸುರಭಿ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.