ಕಡಬ :ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ

0

ಐತ್ತೂರು ಗ್ರಾ.ಪಂ ಸದಸ್ಯ ಮನಮೋಹನ ಗೋಳ್ಯಾಡಿ‌ ಗಂಭೀರ

ಬೈಕ್‌ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ, ಐತೂರು ಗ್ರಾಮ ಪಂಚಾಯತ್ ಸದಸ್ಯ ಮನಮೋಹನ್ ಗೋಳ್ಯಾಡಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಪೆರಿಯಶಾಂತಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ‌ ಸಮೀಪದ‌ ಕಲ್ಲಾಜೆ ‌ಎಂಬಲ್ಲಿ ಸಂಭವಿಸಿದೆ.


ಮನಮೋಹನರು ಚಲಾಯಿಸುತ್ತಿದ್ದ ಬೈಕ್ ಮತ್ತು ಇನ್ನೊಬ್ಬರು ಚಲಾಯಿಸುತ್ತಿದ್ದ ಬೈಕ್ ಮತ್ತು ಕಾಣಿಯೂರು ಕಡೆಯವರೊಬ್ಬರು ಚಲಾಯಿಸುತ್ತಿದ್ದ ಇನ್ನೊಂದು ಬೈಕ್ ಮರ್ದಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿ ಎರಡೂ ವಾಹನಗಳೂ ಜಖಂಗೊಂಡವು. ಎರಡು ವಾಹನ ಸವಾರರಿಗೂ ಗಾಯಗಳಾಗಿದ್ದು, ಅವರಿಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ಮನಮೋಹನ ಗೋಳ್ಯಾಡಿಯವರು ಮೂಲತ: ಮಡಪ್ಪಾಡಿ ಗ್ರಾಮದವರಾಗಿದ್ದು ಕಡಬ ಸಮೀಪ ಕೃಷಿಕರಾಗಿ ನೆಲೆಸಿದ್ದಾರೆ. ಜತೆಗೆ ಐತೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ.