
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ಹಾಗೂ ಏಕಾಹ ಭಜನೆಯು ಫೆ.26 ರಂದು ನಡೆಯಿತು.
ಪ್ರಾತ:ಕಾಲದಲ್ಲಿ ದೇವಳದ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ ರವರು ದೀಪ ಪ್ರಜ್ವಲಿಸಿದರು. ಬಳಿಕ ಸ್ಥಳೀಯ ಭಜಕ ವೃಂದದವರಿಂದ ಭಜನಾ ಸಂಕೀರ್ತನೆಯು ಪ್ರಾರಂಭಗೊಂಡಿತು.









ಬಳಿಕ ಶ್ರೀ ದೇವರಿಗೆ
ಉತ್ಸವದ ಅಂಗವಾಗಿ ಪೂರ್ವಾಹ್ನ ಉಷಾ ಪೂಜೆಯಾಗಿ ವಿಶೇಷವಾಗಿ ಏಕಾದಶ ರುದ್ರಾಭಿಷೇಕವು ನಡೆಯಿತು.
ಈ ಸಂದರ್ಭದಲ್ಲಿ ಅರಂಬೂರು ಭಾರದ್ವಾಜಾಶ್ರಮದ ವೇದ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು.

ಮಧ್ಯಾಹ್ನ ದೇವರಿಗೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಸಂಜೆ ನಾರ್ಕೋಡು ಸದಾಶಿವ ಮಹಾದ್ವಾರದ ಬಳಿಯಿಂದ ಆಕರ್ಷಕ ಕುಣಿತ ಭಜನೆಯೊಂದಿಗೆ ಉಲುಪೆಯ ಮೆರವಣಿಗೆ ಯು ದೇವಳದ ತನಕ ಸಾಗಿ ಬಂತು. ಬಳಿಕ ದೇವಳದಲ್ಲಿ ತಾಲೂಕಿನ ವಿವಿಧ ಕುಣಿತ ಭಜನಾ ತಂಡದವರಿಂದ ನೃತ್ಯ ಭಜನೆಯು ಪ್ರದರ್ಶನಗೊಂಡಿತು. ರಾತ್ರಿ ವಿಶೇಷವಾಗಿ ರಂಗ ಪೂಜೆಯು ನಡೆದು ಪ್ರಸಾದ ವಿತರಣೆಯಾಯಿತು.
ತಾಲೂಕಿನ ವಿವಿಧ ಭಜನಾ ಸಂಘದ ಸದಸ್ಯರಿಂದ ಅಹರ್ನಿಶಿ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯ ಮೂಲಕ ಶಿವರಾತ್ರಿ ಜಾಗರಣೆಯನ್ನು ಮಾಡಲಾಯಿತು.
ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು.
ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಅನ್ನ ಸಂತರ್ಪಣೆಯು ನಡೆಯಿತು.
ಮರುದಿನಸೂರ್ಯೋದಯಕ್ಕೆಭಜನಾಸಂಕೀರ್ತನೆಯುಮಹಾಮಂಗಳಾಚರಣೆಯೊಂದಿಗೆ ದೀಪ ವಿಸರ್ಜನೆಯೊಂದಿಗೆ ಪ್ರಸಾದ ವಿತರಣೆಯಾಗಿ ಸಮಾಪನಗೊಂಡಿತು. ಭಜನಾ ಸಂಘದ ಪದಾಧಿಕಾರಿಗಳು
ಹಾಗೂ ವ್ಯವಸ್ಥಾಪನಾ ಸಮಿತಿ,ಸೇವಾ ಸಮಿತಿ, ಜೀರ್ಣೋದ್ಧಾರ
ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಭಜನಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು.










