ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಜ್ಞಾನ ದಿನಾಚರಣೆಯ ಪ್ರಯುಕ್ತ “ವಿಜ್ಞಾನ ಮತ್ತು ತಾಂತ್ರಿಕ ಪ್ರದರ್ಶನ 2025” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.










ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ರಾಕೆಟ್, ಲಿಫ್ಟ್, ಮಾನವನ ಆಂತರಿಕ ಅಂಗಗಳ ಮಾದರಿ, ಸೌರಮಂಡಲದ ಮಾದರಿ, ಜಲ ಶುದ್ಧೀಕರಣ ಮಾದರಿ, ನ್ಯೂಟನ್’ನ ಚಲನೆಯ ನಿಯಮಗಳ ಮಾದರಿ, ಜ್ವಾಲಾಮುಖಿ ಮಾದರಿ ಮತ್ತು ಔಷಧೀಯ ಸಸ್ಯಗಳನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಇಂಜಿನಿಯರ್, ಉಪನ್ಯಾಸಕರು ಮತ್ತು ಕವಿಯು ಆಗಿರುವಂತ ವಿಜಯ್ ಕುಮಾರ್ ಕನಿಚರ್ ಪ್ರಾಯೋಗಿಕವಾಗಿ hydrolic operated ರಾಕೆಟ್ ಉಡಾವಣೆ ಮಾಡುವ ಮೂಲಕ ಉದ್ಘಾಟಿಸಿ ವಿಜ್ಞಾನ ಮತ್ತು ಗಣಿತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ವಿಜ್ಞಾನವಿಲ್ಲದೆ ಗಣಿತವಿಲ್ಲ ಗಣಿತವಿಲ್ಲದೆ ವಿಜ್ಞಾನವಿಲ್ಲವೆಂದು ನುಡಿದರು. ವಿದ್ಯಾರ್ಥಿಗಳ ಎಲ್ಲಾ ರೀತಿಯ ಮಾದರಿಗಳನ್ನು ಕಂಡು ಬಹಳ ಸಂತೋಷಗೊಂಡು ಹುರಿದುಂಬಿಕೆಯ ಮಾತುಗಳನ್ನಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ವಿದ್ಯಾರ್ಥಿಗಳಿಗೆ ವಿಜ್ಞಾನ ದಿನಾಚರಣೆಯ ಮಹತ್ವವನ್ನು ತಿಳಿಯಪಡಿಸಿದರು.ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್, ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 9ನೇ ತರಗತಿ ವಿದ್ಯಾರ್ಥಿನಿ ಯುಕ್ತ ಬಿ.ಕೆ ನಿರೂಪಿಸಿ ವಂದಿಸಿದರು.










