ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ 20ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2025ರಲ್ಲಿ 100 ಮೀಟರ್ ಓಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆಯುವ ಮೂಲಕ ಅಜ್ಜಾವರ ಗ್ರಾಮದ ನಿಹಾಲ್ ಕಮಾಲ್ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ,. ಈ ಪ್ರತಿಷ್ಠಿತ ಕ್ರೀಡಾ ಕೂಟವು ಆರನೇ ಏಷ್ಯನ್ U-18 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಭಾರತೀಯ ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅಸಾಧಾರಣ ವೇಗ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುವ ಮೂಲಕ, ಫೆಬ್ರವರಿ 28ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಯುವ ಕ್ರೀಡಾಪಟುಗಳ ಆಯ್ಕೆ ಕೂಟದಲ್ಲಿ ಮಿಂಚಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.









ಕೇವಲ 16 ವರ್ಷ ವಯಸ್ಸಿನ ನಿಹಾಲ್ ಕುವೈತ್ ನ FAIPS-
ದೆಹಲಿ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿ ಮತ್ತು ಕುವೈತ್ ಫೆಡರೇಶನ್ ನ ಹೆಮ್ಮೆಯ ಸದಸ್ಯ. ಅವರು CBSE ಶಾಲಾ ರಾಷ್ಟ್ರೀಯ ಪಂದ್ಯಗಳಲ್ಲಿ ಕುವೈತ್ ಅನ್ನು ಪ್ರತಿನಿಧಿಸಿದ್ದಾರೆ. ಮತ್ತು ಫೆಡರೇಶನ್ ಆಶ್ರಯದಲ್ಲಿ ಕುವೈತ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬಹು ಪದಕಗಳನ್ನು ಗೆದ್ದಿದ್ದಾರೆ.
ನಿಹಾಲ್ ಕಮಾಲ್ ಮೂಲತಃ ಸುಳ್ಯದ ಅಜ್ಜಾವರ ಗ್ರಾಮದ ನಿವಾಸಿಯಾಗಿರುವ, ಪ್ರಸ್ತುತ ಕುವೈತ್ ನಲ್ಲಿ ವೃತ್ತಿಯಲ್ಲಿ ಇಂಜಿನಿಯರ್ ಮತ್ತು ಉದ್ಯಮಿಯಾಗಿರುವ ಮಹಮ್ಮದ್ ಕಮಾಲ್ ಮತ್ತು ಕುವೈತ್ ಸರ್ಕಾರಿ ಸ್ವಾಮ್ಯದ ಕುವೈತ್ ತೈಲ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ರಹೀನ ಕಮಾಲ್ ಅವರ ಪುತ್ರ.
ಅವರು ಕುವೈತ್ ನ ಆಲ್ ಸಹಿಲ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಭಾರತದಲ್ಲಿ ತಮ್ಮ ರಜಾ ದಿನಗಳಲ್ಲಿ ಮಂಗಳೂರಿನ
ಖೇಲೋ ಇಂಡಿಯಾ ಕೇಂದ್ರದಲ್ಲಿ ತರಬೇತುದಾರ ಭಕ್ಷಿತ್ ಸಾಲಿಯಾನ್ ಅವರ ಮಾರ್ಗದರ್ಶನದಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಿದ್ದಾರೆ.










