ಶಾಲಾ ಅಕ್ಷರ ದಾಸೋಹ ಸಿಬ್ಬಂದಿಗಳ ದಿಢೀರ್ ಮುಷ್ಕರ

0

ಅಯ್ಯನಕಟ್ಟೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಮಣಿಮಜಲು ಖಂಡನೆ

ಅಯ್ಯನಕಟ್ಟೆ ಸರ್ಕಾರಿ ಶಾಲಾ ಅಕ್ಷರ ದಾಸೋಹ ಅಡುಗೆಯವರು ದಿಢೀರ್ ಆಗಿ ಮುಷ್ಕರ ಆರಂಭಿಸಿದ್ದು, ಅಡುಗೆ ಮಾಡದೆ ಕೂತಿರುವುದಾಗಿ ವರದಿಯಾಗಿದೆ.
ಇದನ್ನು ಅಯ್ಯನಕಟ್ಟೆ ಸ.ಹಿ.ಪ್ರಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಮಣಿಮಜಲು ಖಂಡನೆ ವ್ಯಕ್ತಪಡಿಸಿದ್ದು ಮೊದಲಾಗಿ ತಿಳಿಸದೆ ಯಾವುದೇ ಮುನ್ಸೂಚನೆ ನೀಡದೆ ಇಂದು ದಿಢೀರ್ ಅಡುಗೆ ಮಾಡದೆ ಇದ್ದರೆ ನಾವೇನು ವ್ಯವಸ್ಥೆ ಮಾಡುವುದು? ಶಾಲಾ ಮಕ್ಕಳಿಗೆ ಆಹಾರ ಒದಗಿಸುವುದು ಹೇಗೆ ಎಂದು ಸುದ್ದಿ ಮಾಧ್ಯಮವನ್ನು ಸಂಪರ್ಕಿಸಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.