ಕುಲ್ಕುಂದ ಬಳಿ ಅಕ್ರಮ ಗೋ ಸಾಗಾಟ

0

ಸುಬ್ರಹ್ಮಣ್ಯ ಪೊಲೀಸ್ ರಿಂದ ಬಂಧನ

ಸುಬ್ರಹ್ಮಣ್ಯದ ಕುಲ್ಕುಂದ ಬಳಿ ಗೋ ಸಾಗಾಟ ಮಾಡುತಿದ್ದ ಇಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ಬಂದಿಸಿರುವ ಘಟನೆ ಮಾ.5 ರಂದು ವರದಿಯಾಗಿದೆ.

ಮೂರು ಹೋರಿಗಳನ್ನು ಕರೆದೊಯ್ಯುತಿದ್ದ ವಾಹನ ಸಮೇತ ಗೋ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬಾಳುಗೋಡಿನ ಗಿರೀಶ್ ಮತ್ತು ಕಡಬದ ಸತೀಶ್ ಮಣಿಬಾಂಡ ಎಂಬವರು ಬಂದಿತರು. ಈ ಹಿಂದೆಯೂ ಇವರು ಗಳು ಗೋ ಕಳ್ಳ ಸಾಗಟ ಮಾಡಿದ್ದರೆನ್ನಲಾಗಿದೆ. ಸುಬ್ರಹ್ಮಣ್ಯ ಠಾಣಾ ಎಸ್ ಐ ಕಾರ್ತಿಕ್ ನೇತೃತ್ವದಲ್ಲಿ ನಿಗಾ ವಹಿಸಿ ಪೊಲೀಸರು ಗೋ ಸಾಗಾಟ ಮಾಡುತ್ತಿರುವಾಗಲೇ ಬಂದಿಸಿರುವುದಾಗಿ ತಿಳಿದು ಬಂದಿದೆ.