ಬೆಳ್ಳಾರೆ: ಒತ್ತೆಕೋಲದ ಆಮಂತ್ರಣ ಬಿಡುಗಡೆ

0

ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಬೆಳ್ಳಾರೆಯಲ್ಲಿ ಏಪ್ರಿಲ್ 7 ಮತ್ತು 8ರಂದು ನಡೆಯುವ ಶ್ರೀ ಮಹಾ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಪತ್ರಿಕೆಯನ್ನು ಮಾ. 9ರಂದು ದೈವಸ್ಥಾನದ ವಠಾರದಲ್ಲಿ ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ, ಕಾರ್ಯದರ್ಶಿ ವಸಂತ ಗೌಡ ಪಡ್ಪು, ಕೋಶಾಧಿಕಾರಿ ತೀರ್ಥರಾಮ ಮಣಿಮಜಲು, ಪೂರ್ವ ಅಧ್ಯಕ್ಷರುಗಳಾದ ಆನಂದ ಗೌಡ ಪಡ್ಪು, ಕೊರಗಪ್ಪ ಕುರುಂಬುಡೇಲು , ಹಾಗೂ ನಾರಾಯಣ ಪಾಟಾಲಿ ಬಸ್ತಿಪಡ್ಪು, ಕ್ಯಾ. ಸುದಾನಂದ ಮಣಿಯಾಣಿ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು.