ಗುತ್ತಿಗಾರು: ಹಾಲೆಮಜಲಿನಲ್ಲಿ ಫ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

0


ನಾಲ್ಕೂರು ಗ್ರಾಮದ ಹಾಲೆಮಜಲಿನ ಆರು ತಂಡಗಳ ಹಾಲೆಮಜಲು ಫ್ರೀಮಿಯರ್ ಲೀಗ್ HPL ಟ್ರೋಫಿ 2025 ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇದರ ಅಧ್ಯಕ್ಷ ಆಕರ್ಷ ಕುಳ್ಳಂಪಾಡಿ ದೀಪ ಬೆಳಗಿಸಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಕ್ರಿಕೆಟ್ ಲೀಗ್ ಸಮಿತಿಯ ಸಂಚಾಲಕ ಆಶಿಕ್ ಚೆಮ್ನೂರು, ಪುರುಷೋತ್ತಮ ಹಾಲೆಮಜಲು, ಹರೀಶ್ ಹಾಲೆಮಜಲು, ಮೋಹನ ಎರ್ದಡ್ಕ ಉಪಸ್ಥಿತರಿದ್ದರು. ಆರ್ಸಿಬಿ ಆರು ತಂಡದ ನಾಯಕರುಗಳು, ಕ್ರಿಕೆಟ್ ಆಟಗಾರರು, ಊರಿನವರು ಉಪಸ್ಥಿತರಿದ್ದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು. ಚಿತ್ರ. ವರದಿ : ಡಿಹೆಚ್.