ಮೊಗರ್ಪಣೆ ಯೂನಿಟ್ ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವಜನ ಸಂಘ, ಸುನ್ನಿ ಸ್ಟೂಡೆಂಟ್ ಫೆಡರೇಷನ್ ವತಿಯಿಂದ
ರಂಝಾನ್ ಕಿಟ್ ವಿತರಣೆ ಮಾ 9 ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಿತು.









ಸ್ಥಳೀಯ ಮದ್ರಸ ಮುಅಲ್ಲಿಮ್ ಅಬ್ದುಲ್ ರಶೀದ್ ಝೖನಿ ಯವರು ದುವಾ ನೆರವೇರಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 30 ರಷ್ಟು ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಕೆ ಎಂ ಜೆ ಮೊಗರ್ಪಣೆ ಯೂನಿಟ್ ಅಧ್ಯಕ್ಷ ಜಿ ಕೆ ಅಬ್ದುಲ್ ರಜ್ಜಾಕ್, ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ಲಾ, ಎಸ್ ಎಸ್ ಎಫ್ ಸಮಿತಿ ಕಾರ್ಯದರ್ಶಿ ಶಾಕಿರ್ ಜಯನಗರ, ಹಾಗೂ ಮುಖಂಡ ಸಿದ್ದೀಕ್ ಕಟ್ಟೆಕ್ಕಾರ್ಸ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.










