ಸುಳ್ಯ ನ್ಯಾಯಾಲಯದಲ್ಲಿ ಮಾ. 8 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಹಿರಿಯ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 341 ಪ್ರಕರಣಗಳು ರೂ 12435781ಮೂಲಕ ಇತ್ಯರ್ಥ ಗೊಂಡಿದೆ.
ಹಿರಿಯ ನ್ಯಾಯಾಲಯದಲ್ಲಿ 177 ಕ್ರಿಮಿನಲ್ ಪ್ರಕರಣಗಳಲ್ಲಿ 172 ಪ್ರಕರಣಗಳು ಮೊತ್ತ ರೂ. 21,50,830 ರ ಮೂಲಕ ಇತ್ಯರ್ಥಗೊಂಡಿದ್ದು,41 ಸಿವಿಲ್ ಪ್ರಕರಣಗಳಲ್ಲಿ 18 ಪ್ರಕರಣಗಳು ಮೊತ್ತ ರೂ. 1654000/- ಮೂಲಕ ಇತ್ಯರ್ಥ ಗೊಂಡಿರುತ್ತದೆ.









ಈಗೆ ಹಿರಿಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳು ಒಟ್ಟು 218 ಪ್ರಕರಣ ಗಳಲ್ಲಿ 190 ಪ್ರಕರಣ ಗಳು ರೂ. 3804830 ರ ಮೂಲಕ ಇತ್ಯರ್ಥ ಗೊಂಡಿರುತ್ತದೆ.
ಸಿವಿಲ್ ನ್ಯಾಯಾಲಯದಲ್ಲಿ 166 ಕ್ರಿಮಿನಲ್ ಪ್ರಕರಣಗಳಲ್ಲಿ 140 ಪ್ರಕರಣಗಳು ಮೊತ್ತ ರೂ. 7006780 ರ ಮೂಲಕ ಇತ್ಯರ್ಥಗೊಂಡಿದ್ದು
21 ಸಿವಿಲ್ ಪ್ರಕರಣಗಳಲ್ಲಿ 11 ಪ್ರಕರಣಗಳು ಮೊತ್ತ ರೂ. 1624171/- ಮೂಲಕ ಇತ್ಯರ್ಥ ಗೊಂಡು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳು ಒಟ್ಟು 187 ಪ್ರಕರಣಗಳಲ್ಲಿ 151 ಪ್ರಕರಣಗಳು ರೂ .8630951 ರ ಮೂಲಕ ಇತ್ಯರ್ಥ ಗೊಂಡಿರುತ್ತದೆ.
ಬ್ಯಾಂಕ್ ನ ಪೂರ್ವ ವ್ಯಾಜ್ಯ ಪ್ರಕರಣಗಳು ಒಟ್ಟು 505 ರಲ್ಲಿ 13 ಪ್ರಕರಣಗಳು ರೂ.1187817 ರ ಮೂಲಕ ಇತ್ಯರ್ಥ ಗೊಂಡಿರುತ್ತದೆ.










