ಆರೋಪಿಸುವವರ ಅಚಾತುರ್ಯದಿಂದ ಈ ಸ್ಥಿತಿ ಉಂಟಾಗಿದೆ
ಸಹಕಾರ ಭಾರತಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ :ಸಹಕಾರ ಅಭಿವೃದ್ಧಿ ಬಳಗ
ಕೊಲ್ಲಮೊಗ್ರು -ಹರಿಹರ ಸೊಸೈಟಿ ಚುನಾವಣೆ ಹೈಕೋರ್ಟ್ ತಡೆಯಾಜ್ಞೆಯಿಂದ ಸೊಸೈಟಿ ವ್ಯವಹಾರಕ್ಕೆ ತೊಂದರೆ ಆಗಿಲ್ಲ,
ಈಗ ಆರೋಪಿಸುವವರೇ ಮಾಡಿದ ಅಚಾತುರ್ಯದಿಂದ ಈ ಸ್ಥಿತಿ ಉಂಟಾಗಿದೆ, ವೃಥಾ ಆರೋಪಿಸುವ ಸಹಕಾರ ಭಾರತಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು
ಸಹಕಾರ ಅಭಿವೃದ್ಧಿ ಬಳಗ ಮಾ.೮ ರಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದೆ.
ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಜ.೧೯ ರಂದು ನಡೆದಿದ್ದು, ಸದರಿ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ಬಳಗ, ಸಹಕಾರ ಭಾರತಿ, ಹಾಗೂ ಸ್ವಾಭಿಮಾನ ಬಳಗದ ಮೂರು ತಂಡಗಳು ಸ್ಪರ್ಧಿಸಿರುತ್ತವೆ. ಈ ಪೈಕಿ ಆಡಳಿತ ಮಂಡಳಿ ರಚನೆ ವಿಳಂಬವಾಗಿರುವುದು ಉಚ್ಚ ನ್ಯಾಯಾಲಯದಿಂದ ತಂದಿರುವಂತಹ ತಡೆಯಾಜ್ಞೆ ಕಾರಣ. ಮತದಾನದ ಹಕ್ಕಿನಲ್ಲಿ ಸುಸ್ತಿದಾರರು ಹಾಗೂ ಮೃತಪಟ್ಟವರ ಹೆಸರಿರುವುದಿಂದ ಇದು ಆಗಿರುತ್ತದೆ ಎಂದು ಸೊಸೈಟಿಯ ಮಾಜಿ ಅಧ್ಯಕ್ಷ ಹರ್ಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.









ಸಹಕಾರ ಭಾರತಿ ಅಭ್ಯರ್ಥಿಗಳು ನಮ್ಮ ಮೇಲೆ ಆರೋಪ ಮಾಡಿರುವುದು ಪೂರ್ತಿ ಸುಳ್ಳಾಗಿರುತ್ತದೆ . ಪ್ರಸ್ತುತ ಸೊಸೈಟಿಗೆ ಆಡಳಿತಾಧಿಕಾರಿ ನೇಮಕವಾಗಿದ್ದು ಸಂಘದ ಸದಸ್ಯರಿಗೆ ಬೇಕಾದವರಿಗೆ ಸಾಲದ ಸೌಲಭ್ಯ ,ಬೆಳೆಸಾಲ ರಿನಿವಲ್, ಹೊಸದಾಗಿ ಬೆಳೆ ಸಾಲ, ದೀರ್ಘಾವಧಿ ಸಾಲ, ನವೋದಯ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ಸಾಲಬೇಕಾದವರಿಗೆ ಸೊಸೈಟಿ ಸಾಲ ಮಂಜೂರು ಆಗುತ್ತಿದ್ದರೂ ಸತ್ಯ ಮರೆಮಾಚಿ ಗೂಬೆ ಕೂರಿಸುವ ಕೆಲಸ ನಡೆದಿದೆ. ಚುನಾವಣೆಯ ಫಲಿತಾಂಶ ವಿಳಂಬವಾಗಿರುವುದಕ್ಕೆ ನಾವು ಭಾದ್ಯಾಸ್ಥರಲ್ಲ, ಸುಸ್ತಿದಾರರು ಮತ ಚಲಾಯಿಸಿರುವುದು ಸಹಕಾರ ಭಾರತಿ ತಂಡದವರು ಮಾಡಿದ ಅಚಾತುರ್ಯದ ಕಾರಣವಾಗಿದೆ ಎಂದವರು ತಿಳಿಸಿರುತ್ತಾರೆ. ಸಹಕಾರಿ ಬೈಲಾ ಪ್ರಕಾರ ಸುಸ್ಥಿದಾರರು ಮಹಾಸಭೆಗೆ, ಮತದಾನಕ್ಕೆ, ಸ್ಪರ್ಧಿಸುವ ಹಕ್ಕಿಲ್ಲ. ಹಾಗಿದ್ದರೂ ಅವರಿಗೆ ಮತಹಕ್ಕು ಪಡೆದಿರುವ ಉದ್ದೇಶವಾದರೂ ಏನು ಎಂದರು ಸಹಕಾರ ಭಾರತಿ ಸ್ಪಷ್ಟಪಡಿಸಬೇಕು ಎಂದರು.
ಚುನಾವಣೆಗೆ ಮುಂಚೆ ಮತ್ತು ಚುನಾವಣೆ ಬಳಿಕ ಬೇರೆಬೇರೆ ರೀತಿಯಲ್ಲಿ ಅಪ ಪ್ರಚಾರದಲ್ಲಿ ತೊಡಗಿದ್ದಾರೆ. ಸೊಸೈಟಿಯ ಪೆಟ್ರೋಲ್ ಬಂಕ್ ಗೆ ಜಾಗ ಖರೀದಿ, ಸ್ಟಾಪ್ ಗಳ ನೇಮಕಾತಿಯಲ್ಲಿ ಹೀಗೆ ಹಲವು ಆರೋಪಗಳನ್ನು ನನ್ನ ಮೇಲೆ ಅಕ್ರಮದ ಆರೋಪ ಹೊರಿಸಿದ್ದಾರೆ. ನಾನೇನು ಹೆಚ್ಚು ಹೇಳ ಬಳಸುವುದಿಲ್ಲ. ಆದರೆ ಎಲ್ಲದಕ್ಕೂ ದೇವರಿದ್ದಾನೆ ಸೊಸೈಟಿಯ ನಿಕಟ ಪೂರ್ವ ಅಧ್ಯಕ್ಷ ಹರ್ಷಕುಮಾರ್ ದೇವಜನ ತಿಳಿಸಿದರು..
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಅಭಿವೃದ್ಧಿ ಬಳಗ ಅಭ್ಯರ್ಥಿ ಗಳಾಗಿದ್ದ ವಿಜಯ ಕೂಜುಗೋಡು, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ ,ಮೋನಪ್ಪ .ಕೆ ಉಪಸ್ಥಿತರಿದ್ದರು.










