ಕಂದಡ್ಕ : ವಾಹನ ಗುದ್ದಿ ಗಾಯಗೊಂಡಿದ್ದ ಕರುವಿಗೆ ಸುಳ್ಯದಲ್ಲಿ ಚಿಕಿತ್ಸೆ

0

ದುಗಲಡ್ಕ ಸಮೀಪ ಕಂದಡ್ಕದಲ್ಲಿ ಕರುವಿಗೆ ವಾಹನವೊಂದು ಗುದ್ದಿ ಕರುವಿನ ಕಾಲಿಗೆ ಗಾಯವಾಗಿದ್ದು
ಕರುವನ್ನು ಸುಳ್ಯ ಪಶು ಚಿಕಿತ್ಸಾಲಯಕ್ಕೆ ತಂದು ಚಿಕಿತ್ಸೆ ನೀಡಿದ ಘಟನೆ ನಡೆದಿದೆ.


ಮಂಜೇಶ್ವರದವರು ಹರಿಹರಕ್ಕೆ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವಾಗ ದುಗಲಡ್ಕದಲ್ಲಿ ಕರುವೊಂದು ವಾಹನ ಗುದ್ದಿ ಗಾಯಗೊಂಡು ಒದ್ದಾಡುತ್ತಿತ್ತು.


ಇದನ್ನು ಕಂಡ ಕಾರಿನಲ್ಲಿದ್ದ ಚಂದು ಮತ್ತಿತರರು ಕಾರು ನಿಲ್ಲಿಸಿ ಕರುವಿನ ಹತ್ತಿರ ಬಂದಾಗ ಕರುವಿನ ಕಾಲಿಗೆ ಗಂಭೀರ ಗಾಯವಾಗಿತ್ತು.
ಇದನ್ನು ಕಂಡು ಸ್ಥಳೀಯ ಜೋಸೆಫ್ ಡಿ.ಸೋಜಾ ಎಂಬವರ ರಿಕ್ಷಾದಲ್ಲಿ ಕರುವನ್ನು ಸುಳ್ಯ ಪಶುಚಿಕಿತ್ಸಾಲಯಕ್ಕೆ ತಂದು ಚಿಕಿತ್ಸೆ ನೀಡಲಾಯಿತು.
ವೈದ್ಯಾಧಿಕಾರಿ ನಿತೀನ್ ಪ್ರಭು ಕರುವಿಗೆ ಚಿಕಿತ್ಸೆ ನೀಡಿದರು.